ಬೆಂಗಳೂರು : ಚಂದನ ವಾಹಿನಿಯಲ್ಲಿ ನ.23ರಿಂದ 5, 6 & 7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ‘ಸಂವೇದಾ ಇ–ಕ್ಲಾಸ್’ ಕಾರ್ಯಕ್ರಮ ಪ್ರಸಾರವಾಗಲಿದೆ.
ಶಾಲೆ ಪ್ರಾರಂಭ ನಿಧಾನವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗಾಗಲೇ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಪಾಠಗಳನ್ನು ಕೇಳುತ್ತಿದ್ದಾರೆ. ಈಗ, 5,6 ಮತ್ತು 7ನೇ ತರಗತಿಗಳಿಗೂ ಇದನ್ನು ವಿಸ್ತರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಹೇಳಿದ್ದಾರೆ.
5,6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಕನ್ನಡ, ಇಂಗ್ಲಿಷ್ ಹಾಗು ಹಿಂದಿ ಪಾಠಗಳನ್ನು ಪ್ರಸಾರಮಾಡಲಾಗುವುದು. ಜೊತೆಗೆ ಕನ್ನಡ ಮಾದ್ಯಮದಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ಹಾಗು ಗಣಿತ ವಿಷಯಗಳಲ್ಲಿ ಸಹ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ.
ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ಬೆಳೆಗ್ಗೆ 8 ಗಂಟೆಯಿಂದ 9:30 ವರೆಗೆ ಹಾಗು ಸಂಜೆ 5:30 ರಿಂದ 6 ರವರೆಗೆ ಪಾಠಗಳನ್ನು ಪ್ರಸಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.