ಅಮೆಜಾನ್ ನಿಮಗೆ ಒಂದು ಬಂಪರ್ ಆಫ಼ರ್ ತಂದಿದ್ದು, ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ನೀವು ಇದರಲ್ಲಿ ಭಾಗವಹಿಸಿ ಗೆದ್ದರೆ, ನೀವು ಒಂದೇ ಸಮಯದಲ್ಲಿ 15 ಲಕ್ಷ ರೂ. ಗೆಲ್ಲಬಹುದಾಗಿದ್ದು, ಈ ಅವಕಾಶ ಮಾರ್ಚ್ 22 ರವರೆಗೆ ಲಭ್ಯವಿರುತ್ತದೆ.
ಸಾಂಪ್ರದಾಯಿಕ ಇಕಾಮರ್ಸ್ ಕಂಪನಿ ಅಮೆಜಾನ್ ಆಕರ್ಷಕ ಕೊಡುಗೆಯನ್ನು ಲಭ್ಯಗೊಳಿಸಿದ್ದು, ಅಮೆಜಾನ್ ಸಂಭವ್ ಬಿಲ್ಡ್ ಫಾರ್ ಇಂಡಿಯಾ ಎಂಬ ಹೊಸ ಕಾರ್ಯಕ್ರಮವನ್ನು ತರುತ್ತಿದೆ. ಸ್ಕೈಲಾಂಜಾ ಸಹಭಾಗಿತ್ವದಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು, ಅಭಿವರ್ಧಕರ (ಡೆವಲಪರ್) ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಇದರ ಮುಖ್ಯ ಉದ್ದೇಶ.
ಡೆವಲಪರ್‌ಗಳು ಈ ಅಮೆಜಾನ್ ಸಂಭವ್ ಕಾರ್ಯಕ್ರಮದ ಮೂಲಕ ಆತ್ಮನಿರ್ಭಾರ ಭಾರತ್‌ಗಾಗಿ ಡಿಜಿಟಲ್ ಸಲ್ಯೂಷನ್ಸ್ ಗಳನ್ನು ಪ್ರಾರಂಭಿಸಬೇಕಾಗಿದೆ. ಡೆವಲಪರ್‌ಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಇದು ಉತ್ತಮ ಅವಕಾಶ ಎಂದು ಹೇಳಲಾಗಿದ್ದು, ಹತ್ತು ವಿಜೇತರಿಗೆ 15 ಲಕ್ಷ ರೂ.ವರೆಗೆ ನಗದು ಪ್ರೋತ್ಸಾಹ ನೀಡಲಾಗುವುದು.
ಇಷ್ಟೇ ಅಲ್ಲದೆ ವಿಜೇತರಿಗೆ ಹೆಚ್ಚಿನ ಪ್ರಯೋಜನಗಳೂ ಇರುತ್ತವೆ. ಅಮೆಜಾನ್ ವೆಬ್ ಸಿರೀಸ್ ಕ್ರೆಡಿಟ್ಸ್ ಪಡೆಯಬಹುದು. ವೆಬ್‌ನಾರ್‌ಗಳಲ್ಲಿ ಭಾಗವಹಿಸಬಹುದು. ನೋಂದಣಿ ಪ್ರಕ್ರಿಯೆ ಮಾರ್ಚ್ 22 ರವರೆಗೆ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳನ್ನು https://www.smbhav.com/summit/hackathon ನಲ್ಲಿ ಕಾಣಬಹುದು.
ಬಿಸಿನೆಸ್ ಇನ್ನೋವೇಶನ್, ಸಸ್ಟೈನಬಿಲಿಟಿ ಮತ್ತು ಹೆಲ್ತ್‌ಕೇರ್ ಎಂಬ ಎರಡು ವಿಷಯಗಳಿವೆ. ಡೆವಲಪರ್‌ಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಇವುಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂದರೆ ಸ್ಮಾರ್ಟ್ ಸಿಟಿಗಳು, ಇಂಧನ ದಕ್ಷತೆ, ಡೇಟಾ ವಿಶ್ಲೇಷಣೆ, ಆನ್‌ಲೈನ್ ಮಳಿಗೆಗಳನ್ನು ಸ್ಥಾಪಿಸುವುದು ಮುಂತಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ರಚಿಸುವುದಾಗಿದೆ.