Gruhalakshmi Yojana | ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 2000 ರೂ. ಜಮಾ!

Gruhalakshmi Yojana : ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ಆಗಸ್ಟ್ 2ರಿಂದ ಹಂತ ಹಂತವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಸರ್ಕಾರ ಆರಂಭಿಸಿದ್ದು, ಹಲವಾರು ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದೆ ಎನ್ನಲಾಗಿದೆ.…

Gruhalakshmi Yojana

Gruhalakshmi Yojana : ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ಆಗಸ್ಟ್ 2ರಿಂದ ಹಂತ ಹಂತವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಸರ್ಕಾರ ಆರಂಭಿಸಿದ್ದು, ಹಲವಾರು ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದೆ ಎನ್ನಲಾಗಿದೆ.

ಹೌದು, ಹಲವಾರು ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದ್ದು, ಕೆಲವರ ಪಾವತಿಯಲ್ಲಿ ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾಗಿದೆ. ಆದರೂ, ಈ ಹಣ ಎಲ್ಲರ ಖಾತೆಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಉಳಿದ ಮಹಿಳೆಯರಿಗೂ ಹಣ ಜಮಾ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮೆ?- DBT ಅಪ್ಲಿಕೇಶನ್ ಮೂಲಕ ಚೆಕ್‌ ಮಾಡಿ

ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಬಾಕಿ 2 ಕಂತುಗಳು ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಇಲ್ಲಿಯವರೆಗೆ ಒಟ್ಟು 20ನೇ ಕಂತು ರಿಲೀಸ್ ಆಗಿದೆ. ಸದ್ಯ 21, 22ನೇ ಕಂತುಗಳಿಗೆ ಮಹಿಳೆಯರು ಕಾಯುತ್ತಿದ್ದಾರೆ.

Vijayaprabha Mobile App free

ಯೋಜನೆಯ ಅನುಷ್ಠಾನವನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಮೂಲಕ ಮಾಡಲಾಗುತ್ತಿದೆ ಎಂಬುದು ಹೊಸ ನಿಯಮವಾಗಿದೆ. ಹಣ ಜಮೆಯ ಮಾಹಿತಿಯನ್ನು ಪ್ಲೇ ಸ್ಟೋರ್ ಮೂಲಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ. ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿ ಪರಿಶೀಲಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.