ಬೆಂಗಳೂರು: ನನ್ನ ಮತ್ತು ಸುಮಲತಾರ ನಕಲಿ ಅಶ್ಲೀಲ ವಿಡಿಯೋ ತಯಾರಿಸಿದ್ದಾರೆ’ ಎಂದು ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು, ನಾನು ಮತ್ತು ಸಂಸದೆ ಸುಮಲತಾ ಅವರು ಹೋಟೆಲ್ ಒಳಗೆ ಪ್ರವೇಶಿಸುತ್ತಿರುವ ದೃಶ್ಯವನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ತಯಾರಿಸಿ ಅಕ್ರಮ ಸಂಬಂಧದ ಪಟ್ಟ ಕಟ್ಟಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯತ್ನಿಸಿದ್ದರು ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಇಂದು ಆರೋಪಿಸಿದ್ದಾರೆ.
ಈ ವೇಳೆ, ಈ ಬಗ್ಗೆ ಖಾಸಗಿ ವಾಹಿನಿಯೊಂದರ ನೌಕರ, ಅಂಬರೀಷ್ ಅಭಿಮಾನಿಯೇ ನಮಗೆ ತಿಳಿಸಿದ್ದ. ಈ ವಿಡಿಯೋವನ್ನು ಚುನಾವಣೆ ಪ್ರಚಾರ ವೇಳೆ ಬಿಡುಗಡೆ ಮಾಡಲು ಕುತಂತ್ರ ಹೆಣೆದಿದ್ದರು ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.