ಬ್ರಿಸ್ಬೇನ್ : ಟೆಸ್ಟ್‌ನಲ್ಲಿ 1,000 ರನ್ ಪೂರೈಸುವ ಮೂಲಕ ವಿಕೆಟ್ ಕೀಪರ್, ಬ್ಯಾಟ್ಸಮನ್ ರಿಷಭ್ ಪಂತ್ ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆದಿದ್ದಾರೆ.
ಹೌದು ಕಡಿಮೆ ಇನಿಂಗ್ಸ್‌ನಲ್ಲಿ 1,000 ರನ್ ಗಳಿಸಿದ ಏಕೈಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಬ್ ಪಂತ್ ಪಾತ್ರರಾಗಿದ್ದು, ಈ ಕುರಿತು ಐಸಿಸಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಈವರೆಗೂ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯದಲ್ಲಿ 32 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ಗಳೊಂದಿಗೆ ಧೋನಿ ಅಗ್ರಸ್ಥಾನದಲ್ಲಿದ್ದರು.
ಆದರೆ, ರಿಷಬ್ ಪಂತ್ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದೂ, ಒಟ್ಟು 27 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಗಳಿಸುವ ಮೂಲಕ ಧೋನಿಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಸದ್ಯ ರಿಷಬ್ ಅಗ್ರಸ್ಥಾನ ಅಲಂಕರಿಸಿದ್ದು, ದೋನಿ ಎರಡನೇ ಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಫಾರೂಕ್ (36), ವೃದ್ಧಿಮಾನ್ ಸಹಾ (37) ಮತ್ತು ಮೊಂಗಿಯಾ (39) ಇದ್ದಾರೆ.
1000 Test runs for Rishabh Pant 👏
He is the quickest Indian wicket-keeper to achieve the milestone, in 27 innings!#AUSvIND pic.twitter.com/dk2Fa3stBS
— ICC (@ICC) January 19, 2021