ಮಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕ ಸರ್ಕಾರವು ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದ ಹಿನ್ನಲೆ, ದಕ್ಷಿಣ ಕನ್ನಡದಲ್ಲಿ ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 28 ಮತ್ತು 29 ರಂದು ನಡೆಯಬೇಕಿದ್ದ ತಣ್ಣೀರಬಾವಿ ಬೀಚ್ ಉತ್ಸವವನ್ನು ಮುಂದೂಡಿದೆ.
ಒಂದು ತಿಂಗಳ ಹಿಂದೆ ನಡೆಯಬೇಕಿದ್ದ ಕರಾವಳಿ ಉತ್ಸವದ ಭಾಗವಾಗಿ ಈ ಬೀಚ್ ಉತ್ಸವವನ್ನು ಆಯೋಜಿಸಲಾಗಿತ್ತು. ಬೀಚ್ ಉತ್ಸವದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಬೀಚ್ ಉತ್ಸವದ ಭಾಗವಾಗಿ, ಮಣಿಕಾಂತ್ ಕದ್ರಿ ಅವರ ಲೈವ್ ಕಾನ್ಸರ್ಟ್ ಮತ್ತು ರಘು ದೀಕ್ಷಿತ್ ಅವರ ಕಾನ್ಸರ್ಟ್ ಅನ್ನು ಡಿಸೆಂಬರ್ 28 ಮತ್ತು 29 ರಂದು ಆಯೋಜಿಸಲಾಗಿತ್ತು. ಇದಲ್ಲದೇ, ಜಿಲ್ಲಾಡಳಿತವು ಆಹಾರ ಮಳಿಗೆಗಳು ಮತ್ತು ಸಾಹಸ ಜಲ ಕ್ರೀಡೆಗಳನ್ನು ಆಯೋಜಿಸಿತ್ತು. ರಾಜ್ಯ ಸರ್ಕಾರ ಶೋಕಾಚರಣೆಯನ್ನು ಘೋಷಿಸಿದ ನಂತರ, ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.