ಮತ್ತೆ ಬೀಳುತ್ತೆ ಜೇಬಿಗೆ ಕತ್ತರಿ: ಹೆಚ್ಚಾಗುತ್ತೆ ಅಕ್ಕಿಯ ರೇಟ್‌..!

ಕಳೆದ 2 ವರ್ಷಗಳಿಂದ ನಾನಾ ಕಾರಣಗಳಿಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಭತ್ತದ ಬೆಳೆ ಕಡಿಮೆ ಆಗಿದ್ದು, ಹೀಗಾಗಿ ಒಂದು ಕ್ವಿಂಟಾಲ್‌ ಭತ್ತ ₹ 2600 ಗೆ ಏರಿಕೆಯಾಗಿದೆ. ವರ್ತಕರು ಹಳ್ಳಿಗಳಿಗೆ ಬಂದು ರೈತರಿಂದಲೇ ಕ್ವಿಂಟಾಲ್‌ಗೆ…

rice vijayaprabha news

ಕಳೆದ 2 ವರ್ಷಗಳಿಂದ ನಾನಾ ಕಾರಣಗಳಿಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಭತ್ತದ ಬೆಳೆ ಕಡಿಮೆ ಆಗಿದ್ದು, ಹೀಗಾಗಿ ಒಂದು ಕ್ವಿಂಟಾಲ್‌ ಭತ್ತ ₹ 2600 ಗೆ ಏರಿಕೆಯಾಗಿದೆ.

ವರ್ತಕರು ಹಳ್ಳಿಗಳಿಗೆ ಬಂದು ರೈತರಿಂದಲೇ ಕ್ವಿಂಟಾಲ್‌ಗೆ ₹ 2500-2800 ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಮಾರಾಟ ಮಾಡಲು ರೈತರ ಬಳಿ ಭತ್ತವಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ರೈತರು ತಾವು ಬೆಳೆದಿದ್ದ ಭತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆಯೂ ₹ 2040 ಇದ್ದು, ಆದರೆ ಈಗ ಭತ್ತದ ಬೆಲೆ ಒಂದು ಕ್ವಿಂಟಲ್‌ಗೆ 2,600 ರೂ ಗೆ ಏರಿಕೆಯಾಗಿದೆ. ಆದರೂ ಭತ್ತ ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಬೆಳೆಯಲಾಗಿಲ್ಲ. ಈ ಕೊರತೆ ಅಕ್ಕಿಯ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.