ದಾವಣಗೆರೆ: ಉಡುಪಿಯ ಕುಂದಾಪುರದ ಕಾಲೇಜೊಂದಕ್ಕೆ ಹಿಜಾಬ್ ಧರಿಸಿದ ಮುಸ್ಲಿಂ ಯುವತಿಯರಿಗೆ ತರಗತಿ ನಿರಾಕರಿಸಿರುವ ಕುರಿತು, ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಟೊಳ್ಳು ಘೋಷಣೆ ಎಂಬುದು ಸಾಬೀತಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಕ್ಕೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ರೇಣುಕಾಚಾರ್ಯ ಅವರು, ನಾಚಿಕೆ ಆಗಬೇಕು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಉದ್ದೇಶವೇ ಮಕ್ಕಳಲ್ಲಿ ಮೇಲು-ಕೀಳು ಎಂಬ ಬೇದ ಬಾವ ಹೋಗಲಾಡಿಸಿ ಎಲ್ಲರಲ್ಲೂ ಸಮಾನತೆ ಮೂಡಲಿ ಎಂಬ ಕಾರಣಕ್ಕಾಗಿ. ಮಕ್ಕಳು ಹಿಜಬ್ ಧರಿಸಿ ಬರಲೇಬೇಕು ಎಂದು ಯಾವ ಕಾನೂನು ಹೇಳುತ್ತದೆ.? ಮಕ್ಕಳಲ್ಲೂ ಧರ್ಮದ ವಿಷ ಬೀಜ ಬಿತ್ತಿತ್ತಿರುವವರು ಯಾರು.?
ಎಷ್ಟೇ ಆಗಲಿ ನೀವು ಪಾಕ್ ಬೆಂಬಲಿತ ಉಗ್ರಗಾಮಿ ಸಂಘಟನೆ ಗಳ ಪೋಷಕರಲ್ಲವೇ? ನಿಮ್ಮಿಂದ ಹೆಚ್ಚಿನದೆನನ್ನೂ ನಿರೀಕ್ಷೆ ಮಾಡಲಾಗದು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಇಂತಹ ಸೈತಾನರನ್ನ ಬುಡಸಮೇತ ಬೇರು ಕಿತ್ತು ಹಾಕಿದ್ದನ್ನು ಸಹಿಸಲಾಗದೆ ಆಗಾಗ ಬಡಬಡಿಸುತ್ತ ಇರುತ್ತಾರೆ.ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನಾಚಿಕೆ ಆಗಬೇಕು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಉದ್ದೇಶವೇ ಮಕ್ಕಳಲ್ಲಿ ಮೇಲು-ಕೀಳು ಎಂಬ ಬೇದ ಬಾವ ಹೋಗಲಾಡಿಸಿ ಎಲ್ಲರಲ್ಲೂ ಸಮಾನತೆ ಮೂಡಲಿ ಎಂಬ ಕಾರಣಕ್ಕಾಗಿ.
ಮಕ್ಕಳು ಹಿಜಬ್ ಧರಿಸಿ ಬರಲೇಬೇಕು ಎಂದು ಯಾವ ಕಾನೂನು ಹೇಳುತ್ತದೆ.? ಮಕ್ಕಳಲ್ಲೂ ಧರ್ಮದ ವಿಷ ಬೀಜ ಬಿತ್ತಿತ್ತಿರುವವರು ಯಾರು.? pic.twitter.com/8RJ96i0ZK6
— M P Renukacharya (@MPRBJP) February 3, 2022
ಎಷ್ಟೇ ಆಗಲಿ ನೀವು ಪಾಕ್ ಬೆಂಬಲಿತ ಉಗ್ರಗಾಮಿ ಸಂಘಟನೆ ಗಳ ಪೋಷಕರಲ್ಲವೇ? ನಿಮ್ಮಿಂದ ಹೆಚ್ಚಿನದೆನನ್ನೂ ನಿರೀಕ್ಷೆ ಮಾಡಲಾಗದು
ಹೆಮ್ಮೆಯ ಪ್ರಧಾನಿ@narendramodi ಜಿ ಅಧಿಕಾರಕ್ಕೆ ಬಂದ ಮೇಲೆ ಇಂತಹ ಸೈತಾನರನ್ನ ಬುಡಸಮೇತ ಬೇರು ಕಿತ್ತು ಹಾಕಿದ್ದನ್ನು ಸಹಿಸಲಾಗದೆ ಆಗಾಗ ಬಡಬಡಿಸುತ್ತ ಇರುತ್ತಾರೆ.ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾದ ಅಗತ್ಯವಿಲ್ಲ https://t.co/LGZzEi8ZjO
— M P Renukacharya (@MPRBJP) February 3, 2022




