ನವದೆಹಲಿ : ಖ್ಯಾತ ಭಜನೆ ಗಾಯಕ ನರೇಂದ್ರ ಚಂಚಲ್ (80) ಅವರು ಇಂದು ಮಧ್ಯಾಹ್ನ 12:15ರ ಸುಮಾರಿಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನರೇಂದ್ರ ಚಂಚಲ್ ಅವರು ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರೇಂದ್ರ ಚಂಚಲ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನರೇಂದ್ರ ಚಂಚಲ್ ಅವರು ಪಂಜಾಬಿನ ಅಮೃತಸರದ ಧಾರ್ಮಿಕ ಕುಟುಂಬದಲ್ಲಿ ಜನಿಸಿದ್ದರು.
ಪ್ರಸಿದ್ಧ ಗಾಯಕ ನಿಧನ: ಸಿಎಂ ಸಂತಾಪ
ಖ್ಯಾತ ಭಜನೆ ಗಾಯಕ ನರೇಂದ್ರ ಚಂಚಲ್ (80) ಅವರು ಇಂದು ಮಧ್ಯಾಹ್ನ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಪ್ರಸಿದ್ಧ ಭಜನೆ ಗಾಯಕ ನರೇಂದ್ರ ಚಂಚಲ್ ಜಿ ಅವರ ನಿಧನ ಸುದ್ದಿ ಕೇಳಿ ಮನಸಿಗೆ ತುಂಬಾ ನೋವಾಗಿದೆ. ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ. ನರೇಂದ್ರ ಚಂಚಲ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ಆ ಭಗವಂತ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.