ಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!

ಚೆನ್ನೈ: ಬಿಜೆಪಿ ಮುಖಂಡೆ, ಖ್ಯಾತ ನಟಿ ಖುಷ್ಬು ಸುಂದರ್ ಅವರ ಕಾರು ತಮಿಳುನಾಡಿನ ಮೆಲ್ಮರುವಾತೂರ್ ಬಳಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಟಿ ಖುಷ್ಬೂ ಅವರು ಹೋಗುತ್ತಿದ್ದ ಕಾರಿಗೆ ಟ್ಯಾಂಕರ್ ವೊಂದು ಬಂದು ಗುದ್ದಿದ್ದು, ಅದೃಷ್ಟವಶಾತ್…

Kushboo vijayaprabha news

ಚೆನ್ನೈ: ಬಿಜೆಪಿ ಮುಖಂಡೆ, ಖ್ಯಾತ ನಟಿ ಖುಷ್ಬು ಸುಂದರ್ ಅವರ ಕಾರು ತಮಿಳುನಾಡಿನ ಮೆಲ್ಮರುವಾತೂರ್ ಬಳಿ ಅಪಘಾತಕ್ಕೀಡಾದ ಘಟನೆ ನಡೆದಿದೆ.

ನಟಿ ಖುಷ್ಬೂ ಅವರು ಹೋಗುತ್ತಿದ್ದ ಕಾರಿಗೆ ಟ್ಯಾಂಕರ್ ವೊಂದು ಬಂದು ಗುದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ನಟಿ ಖುಷ್ಬೂ ಅವರು ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಕಡಲೂರಿಗೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಟ್ಯಾಂಕರ್ ವೊಂದು ಖುಷ್ಬೂ ಅವರು ಚಲಿಸುತ್ತಿದ್ದ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದು, ನಟಿ ಖುಷ್ಬೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ

Vijayaprabha Mobile App free

ಈ ಕುರಿತು ಮಾಹಿತಿ ನೀಡಿರುವ ನಟಿ ಖುಷ್ಬೂ ಅವರು ನನ್ನ ಕಾರು ಬಲ ಪಥದಲ್ಲಿ ಚಲಿಸುತ್ತಿತ್ತು. ಟ್ಯಾಂಕರ್ ವೊಂದು ಎಲ್ಲಿಂದಲೋ ಬಂದು ಡಿಕ್ಕಿ ಹೊಡೆದಿದೆ ಎಂದು ಖುಷ್ಬು ಹೇಳಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತು ದೇವರ ಕೃಪೆಯಿಂದ ನಾನು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದು, ತನ್ನ ಮುಂದಿನ ಪ್ರಯಾಣವನ್ನು ಮುಂದುವರೆಸಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.