Flood: ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆ

Flood: ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಪರಿಹಾರ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆ ಬಳಿಕ 5858.60 ಕೋಟಿ ರೂ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (SDRF) ಕೇಂದ್ರ…

Flood: ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಪರಿಹಾರ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆ ಬಳಿಕ 5858.60 ಕೋಟಿ ರೂ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (SDRF) ಕೇಂದ್ರ ಪಾಲು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) ಮುಂಗಡವಾಗಿ ಬಿಡುಗಡೆ ಮಾಡಿದೆ.

IMCT ಗಳ ಪೀಡಿತ ಪ್ರದೇಶಗಳ ಮೌಲ್ಯಮಾಪನ ವರದಿಗಳನ್ನು ಸ್ವೀಕರಿಸಿದ ನಂತರ NDRFನಿಂದ ಹೆಚ್ಚುವರಿ ಹಣಕಾಸಿನ ನೆರವನ್ನು ಅನುಮೋದಿಸಲಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ.

ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರ

  • ಮಹಾರಾಷ್ಟ್ರಕ್ಕೆ ₹1,492 ಕೋಟಿ,
  • ಆಂಧ್ರಪ್ರದೇಶಕ್ಕೆ ₹1,036 ಕೋಟಿ,
  • ಅಸ್ಸಾಂಗೆ ₹716 ಕೋಟಿ,
  • ಬಿಹಾರಕ್ಕೆ ₹655.60 ಕೋಟಿ,
  • ಗುಜರಾತ್‌ಗೆ ₹600 ಕೋಟಿ,
  • ಹಿಮಾಚಲ ಪ್ರದೇಶಕ್ಕೆ ₹189.20 ಕೋಟಿ,
  • ಕೇರಳಕ್ಕೆ ₹145.60 ಕೋಟಿ,
  • ಮಣಿಪುರಕ್ಕೆ ₹50 ಕೋಟಿ,
  • ಮಿಜೋರಾಂಗೆ ತಲಾ ₹21.60 ಕೋಟಿ,
  • ನಾಗಾಲ್ಯಾಂಡ್‌ಗೆ ₹19.20 ಕೋಟಿ,
  • ಸಿಕ್ಕಿಂಗೆ ₹23.60 ಕೋಟಿ,
  • ತೆಲಂಗಾಣಕ್ಕೆ ₹416.80 ಕೋಟಿ,
  • ತ್ರಿಪುರಾಕ್ಕೆ ₹25 ಕೋಟಿ ಮತ್ತು
  • ಪಶ್ಚಿಮ ಬಂಗಾಳಕ್ಕೆ ₹468 ಕೋಟಿ ಬಿಡುಗಡೆ ಮಾಡಿದೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.