temperature report: ಕಳೆದ ಮೂರ್ನಾಲ್ಕು ದಿನದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಸೂರ್ಯನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಅತ್ಯಕ 44.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಜನರು ಹೈರಾಣರಾಗಿದ್ದಾರೆ.
ಇದನ್ನು ಓದಿ: ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುತ್ತೀರಾ? ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ?
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಇದು ಕಳೆದ 15 ವರ್ಷಗಳಲ್ಲೇ ದಾಖಲೆಯ ತಾಪಮಾನ ಏರಿಕೆಯಾಗಿದ್ದು,ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಾದ್ಯಂತ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ.
5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲು!
ಬೆಂಗಳೂರಿನಲ್ಲಿ ಶನಿವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಕಳೆದ 5 ವರ್ಷಗಳಲ್ಲೇ ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ ಇದಾಗಿದೆ. ಎಲ್ ನಿನೊ ಪರಿಣಾಮವು ಪ್ರಸ್ತುತ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದೆ ಎಂದು ಐಎಂಡಿ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಜನರು ಹೈಡ್ರೇಟೆಡ್ ಆಗಿರಲು ಸಲಹೆ ನೀಡಲಾಗಿದೆ.
ಇದನ್ನು ಓದಿ: ನಿಂಬೆಯಲ್ಲಿವೆ ಅನೇಕ ಆರೋಗ್ಯ ಲಾಭಗಳು; ದಿನ ನಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ..?
ಮಾರ್ಚ್ 29, 1996ರಲ್ಲಿ 37.3 ಡಿಗ್ರಿ ಸೆಲ್ಸಿಯಸ್, 2017ರಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದೀಗ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮರು ಕಳಿಸಿದ್ದು, ರಣ ಬಿಸಲು ಜನರನ್ನು ಹೈರಾಣಾಗಿಸಿದೆ.
ಬಿಸಿಲಿನ ತಾಪಮಾನಕ್ಕೆ ಆತಂಕಗೊಂಡ ಬಳ್ಳಾರಿಯ ಜನತೆ..!
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ 38° ಡಿಗ್ರಿಯಿಂದ 41° ತಾಪಮಾನ ದಾಖಲಾಗಿದೆ. ಇಷ್ಟೊಂದು ತಾಪಮಾನಕ್ಕೆ ಗಣಿನಾಡಿನ ಜನರು ಪರದಡುತ್ತಿದ್ದಾರೆ.
ಇದನ್ನು ಓದಿ: ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣ..ಈ ದೇಶಗಳಲ್ಲಿ ಪೂರ್ಣ ಕತ್ತಲು; ಭಾರತದಲ್ಲಿ ಗೋಚರಿಸುತ್ತದೆಯೇ?
ಸ್ಥಳಿಯರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೈಯಲ್ಲಿ ಛತ್ರಿ, ಮುಖಕ್ಕೆ ಮಾಸ್ಕ ಮತ್ತು ಟವೆಲ್ ಗಳನ್ನು ಬಳಸುತ್ತಿದ್ದಾರೆ. ಜೊತೆಗೆ ಈ ಅತಿಯಾದ ಬಿಸಿಲಿನಿಂದ ಮಕ್ಕಳಲ್ಲಿ ಸಾಲಿ ಎಂಬ ಚರ್ಮರೋಗ ಕಾಂಡುಬರುತ್ತಿದ್ದು ಜನರು ಆತಂಕ ಗೊಂಡಿದ್ದಾರೆ.
ಬಿಸಿಲಿಗೆ ರಾಜ್ಯದಲ್ಲಿ ಮೊದಲ ಬಲಿ?
ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಬಿಸಿಲಿನ ತಾಪದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದ ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದು, ಬಿಸಿಲಿನ ಹೊಡೆತಕ್ಕೆ ಶರಣಪ್ಪ ಸಾವನ್ನಪ್ಪಿದ್ದಾರೆಯೇ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |