rcb vs pbks ipl 2024: ಕೊಹ್ಲಿ, DK ಆರ್ಭಟ RCB ಭರ್ಜರಿ ಜಯ

rcb vs pbks ipl 2024: ಬೆಂಗಳೂರಿನಲ್ಲಿ ನಡೆದ 2024ರ ಐಪಿಎಲ್ ಆರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಹೌದು, ಟಾಸ್ ಸೋತು…

rcb vs pbks ipl 2024

rcb vs pbks ipl 2024: ಬೆಂಗಳೂರಿನಲ್ಲಿ ನಡೆದ 2024ರ ಐಪಿಎಲ್ ಆರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ.

ಹೌದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳ ಸವಾಲಿನ ಮೊತ್ತ ಗಳಿಸಿತು. ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್ 45 ರನ್, ಪ್ರಭುಸಿಮ್ರಾನ್ ಸಿಂಗ್ 25 ರನ್, ಲಿವಿಂಗ್ಸ್ಟೋನ್ 17ರನ್, ಸ್ಯಾಮ್ ಕರ್ರಾನ್ 23 ರನ್ , ಜಿತೇಶ್ ಶರ್ಮಾ 27ರನ್ ಸಿಡಿಸಿದರು.

ಇದನ್ನು ಓದಿ: ಮಗು ದತ್ತು ಪಡೆದ ಪ್ರಕರಣ; Sonu Srinivas Gowda ಜೈಲುಪಾಲು

Vijayaprabha Mobile App free

ಇನ್ನು, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಶಾಂಕ್ ಸಿಂಗ್ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 21 ರನ್ ಗಳಿಸುವಲ್ಲಿ ಯಶಸ್ವಿಯಾದರು. RCB ಪರ ಸಿರಾಜ್ 2 ವಿಕೆಟ್, ಮ್ಯಾಕ್ಸ್‌ವೆಲ್ 2 ವಿಕೆಟ್, ಯಶ್ ದಯಾಲ್ ಹಾಗು ಅಲ್ಜಾರಿ ಜೋಸೆಫ್ ತಲಾ 1 ವಿಕೆಟ್ ಪಡೆದರು

rcb vs pbks ipl 2024: ಕೊಹ್ಲಿ, DK ಆರ್ಭಟ

Virat Kohli and Dinesh Karthik
rcb vs pbks ipl 2024 rcb win by 4 wickets

ಇನ್ನು, ಪಂಜಾಬ್ ನೀಡಿದ 177 ರನ್ ಟಾರ್ಗೆಟ್ ಬೆನ್ನಟ್ಟಿದ RCB 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ178 ರನ್ ಗಳಿಸುವ ಮೂಲಕ ನಾಲ್ಕು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.

ಇದನ್ನು ಓದಿ: ಈ ದಿನಾಂಕದವರೆಗೂ ಗೃಹ ಲಕ್ಷ್ಮಿ ಯೋಜನೆ ಹಣ ಬಿಡುಗಡೆ; 2000 ಹಣ ಬಿಡುಗಡೆ ಆಗದೆ ಇರುವುದಕ್ಕೆ ಕಾರಣ ಇದೇ..?

ವಿರಾಟ್‌ ಕೊಹ್ಲಿ 77(49) ಅರ್ಧಶತಕ, ದಿನೇಶ್‌ ಕಾರ್ತಿಕ್‌28(10) ಹಾಗೂ ಮಹಿಪಾಲ್‌ ಲೋಮ್ರಾರ್‌17(08) ಅವರ ಬಿರುಸಿನ ಬ್ಯಾಟಿಂಗ್‌ ಮೂಲಕ ಪಜಾಬ್‌ ವಿರುದ್ದ RCB ರೋಚಕ ಜಯ ದಾಖಲಿಸಿದೆ. ಇತ್ತ ಪಂಜಾಬ್ ಪರ ರಬಡಾ & ಬ್ರಾರ್ ತಲಾ 2, ಹರ್ಷಲ್, ಕರ್ರನ್ ತಲಾ 1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆವೃತ್ತಿಯಲ್ಲಿ ಆರ್‌ಸಿಬಿ ಪ್ರಥಮ ಜಯದ ನಗೆ ಬಿರಿದೆ

ಇನ್ನು, ಅದ್ಬುತ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್‌ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ನನ್ನಲ್ಲಿ ಇನ್ನೂ ಆಟ ಉಳಿದಿದೆ: ವಿರಾಟ್

ಪಂಜಾಬ್ ಕಿಂಗ್ಸ್ ವಿರುದ್ಧ 49 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ RCB ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡಲು ಬಯಸುವುದಾಗಿ ಪಂದ್ಯದ ಬಳಿಕ ಪರೋಕ್ಷವಾಗಿ ತಿಳಿಸಿದರು.

ಇದನ್ನು ಓದಿ: ವೋಟರ್ ID ತಿದ್ದುಪಡಿ ಮಾಡಬೇಕೆ? ಇಂದೇ ಕೊನೆಯ ದಿನ

ʻಆಟವನ್ನು ಕಾಲಕಾಲಕ್ಕೆ ಸುಧಾರಿಸಬೇಕು. ಪ್ರಪಂಚದಾದ್ಯಂತ ಕ್ರಿಕೆಟ್ ಅನ್ನು ಪ್ರಚಾರ ಮಾಡಲು ನನ್ನ ಹೆಸರನ್ನು ಬಳಸಲಾಗುತ್ತಿದೆ ಎಂದು ನನಗೆ ಗೊತ್ತಿದೆ. ಆದರೆ ಟಿ20 ಕ್ರಿಕೆಟ್ ಆಟ ಇನ್ನೂ ನನ್ನಲ್ಲಿ ಉಳಿದಿದೆ ಎಂದು ನಾನು ಭಾವಿಸುತ್ತೇನೆʼ ಎಂದು ಅವರು ಹೇಳಿದರು.

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.