IPL 2022 Auction: ಆ ಆಟಗಾರನಿಗೆ ಬರೋಬ್ಬರಿ 20 ಕೋಟಿ ರೂ ಮೀಸಲಿಟ್ಟ ಆರ್‌ಸಿಬಿ ..?

ಐಪಿಎಲ್ 2022 ಸೀಸನ್‌ಗಾಗಿ ಆಟಗಾರರ ಮೆಗಾ ಹರಾಜಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಫ್ರಾಂಚೈಸಿಗಳು ತೀವ್ರ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಫೆಬ್ರವರಿ 12 ಮತ್ತು…

shreyas-iyer-and-virat-kohli-vijayaprabha-news

ಐಪಿಎಲ್ 2022 ಸೀಸನ್‌ಗಾಗಿ ಆಟಗಾರರ ಮೆಗಾ ಹರಾಜಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಫ್ರಾಂಚೈಸಿಗಳು ತೀವ್ರ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ IPL 2022 ಹರಾಜು ನಡೆಯಲಿದ್ದು, ದೆಹಲಿ ಕ್ಯಾಪಿಟಲ್ಸ್ ಇತ್ತೀಚೆಗೆ ನಾಯಕತ್ವದ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್ ರಿಟೈನ್ ಮಾಡಿಕೊಳ್ಳದೆ ತಂಡದಿಂದ ಕೈಬಿಟ್ಟಿತ್ತು. ಈ ಬಾರಿ ನಡೆಯಲಿರುವ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಶ್ರೇಯಸ್ ಅಯ್ಯರ್‌ ಖರೀದಿಸಿ ನಾಯಕನ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

IPL 2022 ಋತುವಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಅವಕಾಶ ಯಾವ ಆಟಗಾರನಿಗೆ ಇದೆ ? ಈ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, ”ಶ್ರೇಯಸ್ ಅಯ್ಯರ್ ಅವರು ಬೆಂಗಳೂರು ಅಥವಾ ಕೋಲ್ಕತ್ತಾ ತಂಡದ ನಾಯಕರಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದಾಗ್ಯೂ.. ಪಂಜಾಬ್ ಅವರಿಗಾಗಿ ಹೆಚ್ಚು ಪ್ರಯತ್ನಿಸದೇ ಇರಬಹುದು. ಬೇರೆಯವರಿಂದ ನನಗೆ ತಿಳಿದಿದ್ದು ಏನೆಂದರೆ? ಬೆಂಗಳೂರು ಫ್ರಾಂಚೈಸಿ ಈಗಾಗಲೇ ಶ್ರೇಯಸ್ ಅಯ್ಯರ್ ಗಾಗಿ 20 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ತಿಳಿದಿದ್ದು, ನನ್ನ ಪ್ರಕಾರ, ಐಪಿಎಲ್ 2022ರಲ್ಲಿ ಶ್ರೇಯಸ್ ಅಯ್ಯರ್ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Vijayaprabha Mobile App free

ಐಪಿಎಲ್ 2022 ರ ಹರಾಜಿಗೆ 590 ಆಟಗಾರರು ಬರುತ್ತಿದ್ದು, ಇದರಲ್ಲಿ ಡೇವಿಡ್ ವಾರ್ನರ್, ಶಿಖರ್ ಧವನ್ ಮತ್ತು ಡಿಕಾಕ್ ಅವರಂತಹ ಹಿರಿಯ ಆಟಗಾರರು ಸಹ ಇದ್ದಾರೆ. ಆದರೆ.. ಕೋಲ್ಕತ್ತಾ, ಪಂಜಾಬ್ ಮತ್ತು ಬೆಂಗಳೂರು ತಂಡಗಳು ನಾಯಕತ್ವದ ಅನುಭವ ಹೊಂದಿರುವ ಭಾರತೀಯ ಕ್ರಿಕೆಟಿಗನನ್ನು ಹುಡುಕುತ್ತಿವೆ. ವಿರಾಟ್ ಕೊಹ್ಲಿ ಕಳೆದ ವರ್ಷ ಬೆಂಗಳೂರು ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದು ಎಲ್ಲರಿಗು ತಿಳಿದ ವಿಷಯ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.