ಚೆನ್ನೈ : ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಜರ್ಸ್ ಹೈದರಾಬಾದ್ ತಂಡದ ವಿರುದ್ಧ 6 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ 150 ರನ್ ಗಳ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ನಾಯಕ ಡೇವಿಡ್ ವಾರ್ನರ್ (54 ರನ್, 37 ಎಸೆತ), ಮನೀಶ್ ಪಾಂಡೆ (38 ರನ್, 39 ಎಸೆತ), ಜಾನಿ ಬೈರ್ಸ್ಟೋ (12 ರನ್, 13 ಎಸೆತ), ರಶೀದ್ ಖಾನ್ (17 ರನ್, 9 ಎಸೆತ ) ಅವರ ಆಟದ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ 6 ರನ್ ಗಳ ಸೋಲು ಅನುಭವಿಸಿತು. ಇನ್ನು ಆರ್ ಸಿ ಬಿ ತಂಡದ ಪರ ಶಹಬಾಜ್ ಅಹಮದ್ 3, ಮಹಮ್ಮದ್ ಸಿರಾಜ್ 2, ಹರ್ಷಲ್ ಪಟೇಲ್ 2, ಕೈಲ್ ಜೆಮಿಸನ್ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ (33 ರನ್, 29 ಎಸೆತ), ದೇವದತ್ ಪಡಿಕ್ಕಲ್ (11 ರನ್, 13 ಎಸೆತ), ಶಹಬಾಜ್ ಅಹಮದ್ (14 ರನ್, 10 ಎಸೆತ), ಗ್ಲೇನ್ ಮ್ಯಾಕ್ಸ್ ವೆಲ್ (59 ರನ್, 41 ಎಸೆತ ) ಆಟದ ನೆರವಿನಿಂದ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಸನ್ ರೈಸರ್ಸ್ ಪರ ಜೇಸನ್ ಹೋಲ್ಡರ್ 3, ರಶೀದ್ ಖಾನ್ 2, ಭುವನೇಶ್ವರ್, ನಟರಾಜನ್ ಹಾಗು ನದೀಮ್ ತಲಾ 1 ವಿಕೆಟ್ ಪಡೆದರು.
ಇನ್ನು ಆರ್ ಸಿ ಬಿ ತಂಡದ ಪರ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಗ್ಲೇನ್ ಮ್ಯಾಕ್ಸ್ ವೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.