ನವದೆಹಲಿ : ಈಗಾಗಲೇ ಹೊಸ ₹100 ರೂಪಾಯಿ ನೋಟು ಗ್ರಾಹಕರಿಗೆ ಸಿಗುತ್ತಿದ್ದು, RBI ಹಳೇ ಸರಣಿಯ ₹100ರ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ.
ಇನ್ನು ಈ ಕುರಿತು RBI ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ಮಾತನಾಡಿ, ₹100ರ ಮುಖಬೆಲೆಯ ಹಳೆಯ ಸರಣಿಯ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಗ್ರಾಹಕರು ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದು, 100 ರೂಪಾಯಿ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು ಎಂದು ಈ ರೀತಿ ಮಾಡಲಾಗುತ್ತಿದ್ದು, ಗ್ರಾಹಕರಲ್ಲಿ 100 ರೂಪಾಯಿ ಹಳೆಯ ನೋಟು ಇದ್ದರೆ ಬದಲಾಯಿಸಿಕೊಳ್ಳಬಹುದು ಎಂದು RBI ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ಅವರು ಹೇಳಿದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.