ದೇಶದ ಜನತೆಗೆ ಮತ್ತೊಂದು ಶಾಕ್: ಆರ್​ಬಿಐನಿಂದ ಮತ್ತೆ ರೆಪೋ ದರ ಏರಿಕೆ; ರೆಪೋ ದರ ಹೆಚ್ಚಳ ಅಂದರೇನು ಗೊತ್ತೇ? ಇಲ್ಲಿದೆ ನೋಡಿ

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಮತ್ತೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಶೇ 5.40 ಏರಿಕೆಯಾದಂತಾಗಿದ್ದು,…

Shaktikanta Das vijayaprabha

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಮತ್ತೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಶೇ 5.40 ಏರಿಕೆಯಾದಂತಾಗಿದ್ದು, ಸಾಲದ ಮೇಲಿನ ಬಡ್ಡಿ ದರ ಇನ್ನಷ್ಟು ಹೆಚ್ಚಳವಾಗಲಿದೆ.

ಹೌದು, ಇಂದು ಈ ಕುರಿತು ಸುದ್ದಿಗೋಷ್ಟಿ ಕರೆದಿದ್ದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದು, ರೆಪೋ ದರ 5.4ಕ್ಕೆ ತಲುಪಿದ್ದು, ಈ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ರೆಪೊ ದರ ಏರಿಕೆಯಿಂದಾಗಿ ದೇಶದಲ್ಲಿ ಗೃಹ, ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಮತ್ತಷ್ಟು ಜಾಸ್ತಿ ಆಗಲಿದೆ. ಕಳೆದ ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ 7ಕ್ಕೆ ಏರಿಕೆಯಾಗಿತ್ತು. ಇದು ಆರ್‌ಬಿಐನ ನಿರೀಕ್ಷಿತ ಶೇ 2 ರಿಂದ 6 ರ ಮಟ್ಟಕ್ಕಿಂತ ಹೆಚ್ಚಳವಾಗಿತ್ತು. ಇದೀಗ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳವಾಗಿದೆ.

Vijayaprabha Mobile App free

ಹಣದುಬ್ಬರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಆರ್‌ಬಿಐ ಕಳೆದ ಎರಡು ಸಭೆಗಳಲ್ಲೂ ಬಡ್ಡಿ ದರವನ್ನು(ರೆಪೊ) ಏರಿಕೆ ಮಾದ್ದು, ಇಂದೂ ಸಹ ಮತ್ತೆ ಏರಿಕೆ ಮಾಡಿದ್ದು, ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ. ಈ ಮೂಲಕ ಬ್ಯಾಂಕ್​​ಗಳು ನೀಡುವ ಸಾಲಕ್ಕೆ ಹೆಚ್ಚುವರಿ ಬಡ್ಡಿ ಸೇರಿದಂತೆ ನಿಮ್ಮ ಇಎಂಐ ಕಂತುಗಳ ಬಡ್ಡಿಯಲ್ಲಿಯೂ ಏರಿಕೆಯಾಗಲಿದೆ.

ರೆಪೋ ದರ ಹೆಚ್ಚಳ ಅಂದರೇನು ?

ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಮತ್ತೆ ರೆಪೋ ದರವನ್ನು ಶೇ.50 ಬೇಸಿಸ್‌ ಪಾಯಿಂಟ್‌ ಹೆಚ್ಚಿಸಿದೆ. ರೆಪೋ ದರ ಏನು ಎನ್ನುವುದು ಇನ್ನೂ ಹಲವರಿಗೆ ಗೊತ್ತಿಲ್ಲ. ಉತ್ತರ ತುಂಬಾ ಸರಳ.

ರಾಷ್ಟ್ರದ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಅನಿವಾರ್ಯತೆಯ ವೇಳೆ ಸಾಲ ನೀಡುತ್ತದೆ. ಈ ಸಾಲದ ಮೇಲೆ ಬಡ್ಡಿ ವಿಧಿಸುತ್ತದೆ. ಈ ಬಡ್ಡಿ ದರವನ್ನೇ ರೆಪೋ ರೇಟ್‌ ಎನ್ನುತ್ತಾರೆ. ಇದರಿಂದ ಸಾರ್ವಜನಿಕರು ಮಾಡುವ ವಿವಿಧ ಸಾಲಗಳ ಮೇಲಿನ ಬಡ್ಡಿ, ಇಎಂಐ ಏರಿಕೆಯಾಗಲಿದೆ. ಕಳೆದ ಜೂನ್‌ನಲ್ಲಿ RBI 50 ಮೂಲಾಂಕ ಏರಿಸಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.