ಪೊಲೀಸ್ ಸೊಸೆಯ ಮೇಲೆ ಪೊಲೀಸ್ ಮಾವನಿಂದ ಅತ್ಯಾಚಾರ; ಟ್ರಿಪಲ್ ತಲಾಕ್ ನೀಡಿದ ಪತಿ!

ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಕುಟುಂಬದಲ್ಲಿ ದೌರ್ಜನ್ಯ ನಡೆದಿದ್ದು, ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಸೊಸೆಯ ಮೇಲೆ ಅದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಮಾವ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಹೌದು ಆ…

rape vijayaprabha news

ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಕುಟುಂಬದಲ್ಲಿ ದೌರ್ಜನ್ಯ ನಡೆದಿದ್ದು, ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಸೊಸೆಯ ಮೇಲೆ ಅದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಮಾವ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಹೌದು ಆ ಕುಟುಂಬದ ಮಾವ, ಮಗ ಮತ್ತು ಸೊಸೆ ಎಲ್ಲರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೀರತ್‌ನಲ್ಲಿ ರಿಸರ್ವ್ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆ ಬುಧವಾರ ರಾತ್ರಿ ಮನೆಯಲ್ಲಿ ಒಬ್ಬಳೇ ಇದ್ದಳು. ಆ ಸಮಯದಲ್ಲಿ, ಆಕೆಯ ಮಾವ ನಜೀರ್ ಅಹ್ಮದ್ ಮನೆಯೊಳಗೆ ಪ್ರವೇಶಿಸಿ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಆದರೆ, ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತನ್ನ ಪತಿಗೆ ತಿಳಿಸಿದ್ದಾಳೆ. ಇದೇ ಕಾರಣಕ್ಕಾಗಿ ಆಕೆಯ ಪತಿ ನಿಷೇಧಿತ ಟ್ರಿಪಲ್ ತಲಾಖ್ ನೀಡಿದ್ದಾನೆ. ಇದರಿಂದ ಆಕೆ ಮೀರತ್ ಎಸ್‌ಪಿಯನ್ನು ಭೇಟಿ ಮಾಡಿ ದೂರು ನೀಡಿದ್ದಾಳೆ.

Vijayaprabha Mobile App free

ಇನ್ನು, ಆರೋಪಿ ನಜೀರ್ ಮತ್ತು ಸಂತ್ರಸ್ತೆಯ ಪತಿ ಅಬಿದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮೂರು ವರ್ಷಗಳ ಹಿಂದೆ ಅಬಿದ್‌ನನ್ನು ಮದುವೆಯಾಗಿದ್ದಳು. ಸೊಸೆಯಾಗಿ ಮಾವನ ಮನೆಗೆ ಹೊಸ ಜೀವನ ಮಾಡುವುದಕ್ಕೆ ಪ್ರವೇಶಿಸಿದಾಗಿನಿಂದ ಮಾವನ ಮನೆಯರು ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.