ಬೆಳಗಾವಿ:ಚುನಾವಣಾ ಹತ್ತಿರವಾಗುತ್ತಿದಂತೆ ಬಿಜೆಪಿ-ಕಾಂಗ್ರೆಸ್ ನಾಯಕರುಗಳ ಭಾರೀ ವಾಕ್ಸಮರ ನಡೆಯುತ್ತಿದ್ದು, ಹಾಲಿ ಶಾಸಕರಿಗಿಂತ ನಾವು 10 ಕೋಟಿ ಜಾಸ್ತಿ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಹೌದು, ಬೆಳಗಾವಿಯ ಸುಳೆಬಾವಿ ಗ್ರಾಮದಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಕೆಲವರು ಡಬ್ಬಿ, ಮಿಕ್ಸರ್ ಸೇರಿ ₹3,000 ಖರ್ಚು ಮಾಡುತ್ತಿದ್ದಾರೆ. ₹6,000 ಕಾಣಿಕೆ ಕೊಡುವ ತಾಕತ್ತು ನಮಗೂ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕುಕ್ಕರ್ ಕೊಟ್ಟು ಸುದ್ದಿಯಾಗಿದ್ದರೆ, ಅಳಿಯ ರಜತ್ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ, ಶರ್ಟ್ ಕೊಟ್ಟು ಸುದ್ದಿಯಾಗಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಕೆಟ್ಟ ಹುಳ:
ಇನ್ನು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೆಟ್ಟ ಹುಳ ಎಂದು ಸಾಹುಕಾರ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಾಗ್ಧಾಳಿ ನಡೆಸಿದ್ದಾರೆ. ಆ ಕೆಟ್ಟು ಹುಳ, ಅದನ್ನು ನಾವೇ ಕರೆದು ತಂದಿದ್ದೀವಿ, ಅದು ಸಮಾಜಕ್ಕೆ ಕೆಟ್ಟ ಹುಳವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.