ಬೆಂಗಳೂರು : ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದು, ನನಗೆ ರಾಜಕಾರಣ ಬೇಕಿಲ್ಲ, ಕುಟುಂಬದ ಗೌರವ ಮುಖ್ಯ ಎಂದು ಹೇಳಿದ್ದಾರೆ. ನನಗೆ ಎಲ್ಲಾ ಪಕ್ಷದ ನಾಯಕರ ಬಗ್ಗೆಯೂ ಗೌರವವಿದೆ. ಹೆಚ್.ಡಿ.ಕುಮಾರಸ್ವಾಮಿ & ಹೆಚ್.ಡಿ.ರೇವಣ್ಣ ನನ್ನ ಪರ ಮಾತನಾಡಿದ್ದಾರೆ. ಇದಕ್ಕೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ಡೀಲ್ ನಡೆದಿದೆ. ಯುವತಿಗೆ 5 ಕೋಟಿ ನೀಡಿ, ವಿದೇಶದಲ್ಲಿ 2 ಅಪಾರ್ಟ್ಮೆಂಟ್ ಕೊಡಲಾಗಿದೆ. ಆರೋಪವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ. ನನಗೆ ಖಾತೆ ಬೇಕೆಂದು ಕೇಳಲು ಹೋಗಲ್ಲ ಎಂದಿದ್ದಾರೆ.
ಸಿಡಿ ಪ್ರಕರಣದ ಹಿಂದೆ ಮಹಾನ್ ನಾಯಕನಿದ್ದಾನೆ: ರಮೇಶ್ ಜಾರಕಿಹೊಳಿ
ಸೆಕ್ಸ್ ಸಿಡಿ ಬಗ್ಗೆ ಗೊತ್ತಾಗುತ್ತಿದ್ದಂತೆ ನನ್ನ ಸಹೋದರ ಬಂದು ಕೇಳಿದ. ಅದಕ್ಕೆ ಇಂಥ ಹೊಲಸು ಕೆಲಸ ಮಾಡುವವನು ನಾನಲ್ಲ ಎಂದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಇಂದು ತಿಳಿಸಿದ್ದಾರೆ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲಾ ಆಗಿದೆ. ಅವರ ಬಗ್ಗೆ ಈಗ ಹೇಳಲು ಆಗಲ್ಲ. ಇದೊಂದು ಬಹಳ ಸೂಕ್ಷ್ಮ ವಿಚಾರ. ಈ ಬಗ್ಗೆ ರಾಜಕೀಯ ಮಾಡಲು ಹೋಗಬಾರದು. ಬೆಂಗಳೂರಿನ ಯಶವಂತಪುರ, ಹುಳಿಮಾವಿನಲ್ಲಿ ಈ ಷಡ್ಯಂತ್ರ ನಡೆದಿದೆ. ಷಡ್ಯಂತ್ರ ಮಾಡಿದವರನ್ನು ನಾನು ಸುಮ್ಮನೆ ಬಿಡಲ್ಲ, ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ.
ಇದನ್ನು ಓದಿ: 26 ಗಂಟೆ ಮೊದಲೇ ಸಿಡಿ ಬಿಡುಗಡೆ ಬಗ್ಗೆ ಹೈಕಮಾಂಡ್ ಮಾಹಿತಿ; ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ