ಆಗಸ್ಟ್ 11 ರಂದು ರಕ್ಷಾಬಂಧವಾಗಿದ್ದು, ಇದು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯದ ಪ್ರತೀಕವಾಗಿದೆ. ಸಹೋದರನ ಕೈಗೆ ರಾಖಿ ಕಟ್ಟುವ ಸಹೋದರಿ, ಅವನ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾಳೆ.
ಈಗ ಬೇರೆ ಬೇರೆ ಕಾರಣಗಳಿಂದಾಗಿ ದೂರದೂರಿನಲ್ಲಿರುವ ಸಹೋದರರಿಗೆ ರಾಖಿ ಕಳಿಸಲು, ಈ ವರ್ಷ ರಕ್ಷಾಬಂಧನದ ಅಂಗವಾಗಿ ಅಂಚೆ ಇಲಾಖೆಯಿಂದ ರಾಖಿ ಪೋಸ್ಟ್ ವಿಶೇಷ ಸೌಲಭ್ಯ ಪರಿಚಯಿಸಲಾಗಿದೆ. ಸಹೋದರಿಯರು ಆನ್ಲೈನ್‌ನಲ್ಲಿ ರಾಖಿ ಬುಕ್ ಮಾಡಿ ರಾಖಿಯೊಂದಿಗೆ ಶುಭಾಶಯಗಳನ್ನು ಕಳುಹಿಸುವ ಅವಕಾಶವನ್ನು ಕರ್ನಾಟಕ ಅಂಚೆ ವಿಭಾಗ ಕಲ್ಪಿಸಿದೆ.
ಹೌದು, ಅಂಚೆ ಇಲಾಖೆಯ ವೆಬ್ಸೈಟ್‌ನಲ್ಲಿ ವಿವಿಧ ವಿನ್ಯಾಸದ ರಾಖಿಗಳು ಲಭ್ಯವಿದ್ದು, ಇದಕ್ಕಾಗಿ 120 ರೂ. ದರ ನಿಗದಿಪಡಿಸಲಾಗಿದೆ. ಆಸಕ್ತರು https://www.Karnataka post.gov.in/rakhipost ವೆಬ್ಸೈಟ್ ಗಮನಿಸಬಹುದಾಗಿದೆ. ಇದಕ್ಕಾಗಿ, ‘ಅಂಚೆ ಇಲಾಖೆ- ಕರ್ನಾಟಕ’ ಲಾಗಿನ್ ಆದರೆ, ಸಂಬಂಧಿತ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ವಿವರ, ಬೇಕಾದ ರಾಖಿ ಆಯ್ಕೆ ಮಾಡಿಕೊಂಡು ಹಣ ಪಾವತಿಸಿದರೆ ಸಾಕು.