ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 196 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ 18.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿತು. ರಾಜಸ್ತಾನ್ ರಾಯಲ್ಸ್ ಪರ ಬೆನ್ ಸ್ಟೋಕ್ಸ್ -107*, ರಾಬಿನ್ ಉತ್ತಪ್ಪ – 13, ಸ್ಟಿವನ್ ಸ್ಮಿತ್ – 11*, ಹಾಗು ಸಂಜು ಸ್ಯಾಮ್ಸನ್-54* ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಜೇಮ್ಸ್ ಪ್ಯಾಟಿನ್ಸನ್ 2 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಮುಂಬೈ ಪರ ಇಶಾನ್ ಕಿಶನ್-37, ಸೂರ್ಯ ಕುಮಾರ್ ಯಾದವ್-40, ಸೌರಭ್ ತಿವಾರಿ-34, ಹಾಗು ಹಾರ್ದಿಕ್ ಪಾಂಡ್ಯ-60* ರನ್ ಗಳಿಸಿದರು. ಇನ್ನು ರಾಜಸ್ತಾನ್ ಪರ ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್, ಕಾರ್ತಿಕ್ ತ್ಯಾಗಿ 1 ವಿಕೆಟ್ ಪಡೆದರು.
ರಾಜಸ್ತಾನ್ ರಾಯಲ್ಸ್ ಪರ ಅಮೋಘ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಬೆನ್ ಸ್ಟೋಕ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.




