ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 26 ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗೆಲುವು ರೋಚಕ ಗೆಲುವು ದಾಖಲಿಸಿದೆ.
158 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ 163 ರನ್ ಗಳಿಸಿ 5 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು. ರಾಜಸ್ತಾನ್ ರಾಯಲ್ಸ್ ಪರ, ಜೋಸ್ ಬಟ್ಲರ್-42, ಸಂಜು ಸ್ಯಾಮ್ಸನ್-33, ರಾಬಿನ್ ಉತ್ತಪ್ಪ-18, ರಿಯಾನ್ ಪರಾಗ್-42, ರಾಹುಲ್ ತೆವಟಿಯ- 45 ರನ್ ಗಳಿಸಿದರು. ಸನ್ ರೈಸರ್ಸ್ ಹೈದಾಬಾದ್ ಪರ, ಖಲೀಲ್ ಅಹಮದ್ 2, ರಶೀದ್ ಖಾನ್-2 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸ್ಯಾನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಟಗಾರ ಜಾನಿ ಬೆರ್ಸ್ಟ್ರೋ-16, ನಾಯಕ ಡೇವಿಡ್ ವಾರ್ನರ್-48, ಮನೀಶ್ ಪಾಂಡೆ-54, ವಿಲಿಯಮ್ಸನ್-22, ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ರಾಜಸ್ತಾನ್ ರಾಯಲ್ಸ್ ಪರ, ಜೊಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಹಾಗು ಜಯದೇವ್ ಉನದ್ಕತ್ ತಲಾ ಒಂದು ವಿಕೆಟ್ ಪಡೆದರು.