ಅಬುದಾಬಿ: ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶೇಖ್ ಜಾಯೆದ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 37ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 7 ವಿಕೆಟ್ ಗಳ ಹೀನಾಯ ಸೋಲನುಭವಿಸಿತು.
ಈ ಸೋಲಿನಿಂದ ಚೆನ್ನೈ ಪ್ಲೇ ಆಫ್ ಗೆ ಎಂಟ್ರಿ ಕೊಡುವ ಕನಸು ಬಹುತೇಕ ಭಗ್ನವಾದಂತಾಗಿದೆ. ಇನ್ನೇನಿದ್ದರೂ ಚೆನ್ನೈ ತನ್ನ ಅಭಿಮಾನಿಗಳಿಗಾಗಿ ಉಳಿದ ಪಂದ್ಯಗಳನ್ನು ಆಡಬೇಕು.
126 ರನ್ ಸುಲಭ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ 7 ವಿಕೆಟ್ ಗಳ ಸುಲಭ ಜಯ ದಾಖಲಿಸಿತು. ರಾಜಸ್ತಾನ್ ಪರ ಬೆನ್ ಸ್ಟೋಕ್ಸ್-19, ನಾಯಕ ಸ್ಟಿವನ್ ಸ್ಮಿತ್-26*, ಹಾಗು ಜೋಸ್ ಬಟ್ಲರ್-21* ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಾಹರ್ 2 ವಿಕೆಟ್, ಹೆಜೆಲ್ ವುಡ್ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ ಕರಣ್-22, ನಾಯಕ ಧೋನಿ-28, ರವೀಂದ್ರ ಜಡೇಜಾ-35 ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಎಲ್ಲಾ 5 ವಿಕೆಟ್ ಕಳೆದುಕೊಂಡು ಕೇವಲ 126 ರನ್ ಮಾತ್ರ ಗಳಿಸಿತು. ರಾಜಸ್ತಾನ್ ಪರ ಜೊಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ರಾಹುಲ್ ತೇವತಿಯ ಹಾಗು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ರಾಜಸ್ತಾನ್ ರಾಯಲ್ಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಐಪಿಎಲ್ ನಲ್ಲಿ ದೋನಿ ದ್ವಿಶತಕ ಸಾಧನೆ !