ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಹಾಗು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, 17 ಜಿಲ್ಲೆಗಳಲ್ಲಿ ಏಪ್ರಿಲ್ 26 ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಮಲೆನಾಡು, ದಕ್ಷಿಣ ಒಳನಾಡು ಭಾಗದ ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ರಾಮನಗರ, ಹಾಸನ, ಕೊಡಗು, ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಬೀದರ್, ಹಾವೇರಿ, ಕೊಪ್ಪಳ ಸೇರಿ ಒಟ್ಟು 17 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.
ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಉಷ್ಣಾಂಶ:
ಬೆಂಗಳೂರು: ಉಷ್ಣಾಂಶ/ ಗರಿಷ್ಠ 34°/ಕನಿಷ್ಠ 22°. ಮೈಸೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 21°. ಮಂಗಳೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 24°. ಕಲಬುರ್ಗಿ: ಉಷ್ಣಾಂಶ/ ಗರಿಷ್ಠ 41°/ ಕನಿಷ್ಠ 25°. ರಾಯಚೂರು: ಉಷ್ಣಾಂಶ/ ಗರಿಷ್ಠ 39°/ಕನಿಷ್ಠ 27°. ಧಾರವಾಡ: ಉಷ್ಣಾಂಶ/ ಗರಿಷ್ಠ 35°/ಕನಿಷ್ಠ 21°. ಮಡಿಕೇರಿ: ಉಷ್ಣಾಂಶ/ ಗರಿಷ್ಠ 27°/ಕನಿಷ್ಠ 19°. ಬಳ್ಳಾರಿ: ಉಷ್ಣಾಂಶ/ ಗರಿಷ್ಠ 41°/ಕನಿಷ್ಠ 26° ಇರಲಿದೆ.