ರಾಜ್ಯದಲ್ಲಿ ಎಡೆಬಿಡದ ಸುರಿಯುತ್ತಿದ್ದ ಮಳೆಗೆ ಸಣ್ಣ ಬ್ರೇಕ್ ಬೀಳಲಿದ್ದು, ಇಂದಿನಿಂದ ಐದು ದಿನ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ದೀಪಾವಳಿ ಹಬ್ಬದ ಸಂಭ್ರಮ ನೀರು ಪಾಲಾಗುವ ಆತಂಕ ಕಡಿಮೆಯಾಗಿದೆ.
ಹೌದು, ಅಕ್ಟೋಬರ್ 25ರ ತನಕ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇದೆ. ಇಂದು ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದ್ದರೂ ನಾಳೆಯಿಂದ ವರುಣಾರ್ಭಟ ಇರುವುದಿಲ್ಲ. 4 ತಿಂಗಳುಗಳಿಂದ ಸತತ ಮಳೆಯಿಂದ ಕಂಗೆಟ್ಟಿದ್ದ ಜನರಿಗೆ ಇದು ಸಂತಸ ತರಲಿದೆ.
ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡು ಹಾಗೂ ಕರಾವಳಿಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಂದೆರಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇನ್ನು, ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹವಾಮಾನ ವರದಿ:
ಬೆಂಗಳೂರು: 28-18, ಮಂಗಳೂರು: 31-24, ಶಿವಮೊಗ್ಗ: 31-19, ಬೆಳಗಾವಿ: 28-18, ಮೈಸೂರು: 29-19, ಮಂಡ್ಯ: 29-18, ಮಡಿಕೇರಿ: 27-15, ರಾಮನಗರ: 30-18, ಹಾಸನ: 28-17, ಚಾಮರಾಜನಗರ: 29-19, ಚಿಕ್ಕಬಳ್ಳಾಪುರ: 28-17, ಕೋಲಾರ: 28-18, ತುಮಕೂರು: 29-18, ಉಡುಪಿ: 32-24, ಕಾರವಾರ: 32-25, ಚಿಕ್ಕಮಗಳೂರು: 28-17, ದಾವಣಗೆರೆ: 29-19 ಡಿಗ್ರಿ ಸೆಲ್ಸಿಯಸ್ ಇರಲಿದೆ.