ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್: ಟಿಕೆಟ್ ಬುಕ್ ಮಾಡಲು ಹೊಸ ಆಯ್ಕೆ!

ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದ್ದು, ರೈಲ್ವೆ ಟಿಕೆಟ್‌ ಬುಕ್‌ ಮಾಡುವ ವಿಚಾರದಲ್ಲಿ ವಿಶೇಷ ಆಯ್ಕೆಯನ್ನು ರೈಲ್ವೆ ಇಲಾಖೆ ನೀಡಿದೆ. ಹೌದು, ರೈಲು ಟಿಕೆಟ್‌ ಬುಕ್ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಪ್ರಯಾಣಿಕರ ಕಷ್ಟಗಳನ್ನು…

train vijayaprabha news

ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದ್ದು, ರೈಲ್ವೆ ಟಿಕೆಟ್‌ ಬುಕ್‌ ಮಾಡುವ ವಿಚಾರದಲ್ಲಿ ವಿಶೇಷ ಆಯ್ಕೆಯನ್ನು ರೈಲ್ವೆ ಇಲಾಖೆ ನೀಡಿದೆ.

ಹೌದು, ರೈಲು ಟಿಕೆಟ್‌ ಬುಕ್ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಪ್ರಯಾಣಿಕರ ಕಷ್ಟಗಳನ್ನು ಗಮನಿಸಿದ ರೈಲ್ವೇ ಇಲಾಖೆ, ಹೊಸ ಆಯ್ಕೆ ಕಲ್ಪಿಸಿದ್ದಾರೆ.ಅದರಂತೆ ಪ್ರಯಾಣಿಕರು ಕ್ಷಣಗಳಲ್ಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ಪ್ರಯಾಣಿಕರು ರೈಲು ಹೊರಡುವ ಐದು ನಿಮಿಷಗಳ ಮುಂಚೆ ಬುಕ್ಕಿಂಗ್‌ ಕೌಂಟರ್‌ ಅಥವಾ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದು. ನಾಲ್ಕು ಗಂಟೆಗಳ ಮುಂಚೆ ಹಾಗೂ ಅರ್ಧಗಂಟೆ ಮುಂಚೆ ಎರಡು ಚಾರ್ಟ್‌ಗಳನ್ನು ರೈಲ್ವೆ ಇಲಾಖೆ ಸಿದ್ಧಪಡಿಸಲಿದ್ದು, ಎರಡನೇ ಚಾರ್ಟ್‌ನಲ್ಲಿರುವ ಆಸನಗಳ ಲಭ್ಯತೆ ಮೇಲೆ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಬಹುದು.

Vijayaprabha Mobile App free

ನೀವು https://www.irctc.co.in/online-charts/ ವೆಬ್‌ಸೈಟ್‌ಗೆ ಹೋಗಿ ರೈಲು ಸಂಖ್ಯೆ, ದಿನಾಂಕ, ಹತ್ತುವ ನಿಲ್ದಾಣದ ವಿವರಗಳನ್ನು ನೀಡಿದರೆ, ಪ್ರತಿ ಕೋಚ್‌ನಲ್ಲಿ ಎಷ್ಟು ಸೀಟುಗಳು ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.