ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ 96 ವರ್ಷ ವರ್ಷದ 2ನೇ ಎಲಿಜಬೆತ್ ಸ್ಕಾಟ್‌ಲೆಂಡ್‌ನ ಬಾಲ್‌ಮೊರಲ್ ಅರಮನೆಯಲ್ಲಿ ಮೃತಪಟ್ಟಿದ್ದಾರೆ.
ಹೌದು, ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರಿಗೆ 96 ವರ್ಷ ವಯಸ್ಸಾಗಿತ್ತು. ರಾಣಿಗೆ ಕಳೆದ ಅಕ್ಟೋಬರ್ ತಿಂಗಳಿನಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅಂದಿನಿಂದ ಅವರಿಗೆ ನಿಲ್ಲಲು & ನಡೆದಾಡಲು ಕಷ್ಟವಾಗುತ್ತಿತ್ತು. ನಿನ್ನೆ ನಡೆಯಬೇಕಿದ್ದ ರಾಜ ಮನೆತನದ ಆಪ್ತ ನ್ಯಾಯಮಂಡಳಿಯ ಸಭೆಯನ್ನು ರಾಣಿ ದಿಢೀರ್ ರದ್ದುಗೊಳಿಸಿದ್ದರು.
1953 ರಿಂದ ಬ್ರಿಟನ್‌ನ ರಾಣಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರ ಪೂರ್ಣ ಹೆಸರು ಅಲೆಕ್ಸಾಂಡ್ರ ಮೇರಿ ವಿಂಡ್ಸರ್. ಚಾರ್ಲ್ಸ್ ಇವರು ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
2ನೇ ಎಲಿಜಬೆತ್ ಬಗೆಗಿನ ಆಸಕ್ತಿಕರ ವಿಚಾರಗಳು
* ಬ್ರಿಟಿಷ್ ಪಡೆಯ ಸದಸ್ಯತ್ವ ಪಡೆದ ರಾಜಮನೆತನದ ಮೊದಲ ವ್ಯಕ್ತಿ.
* 21ನೇ ವಯಸ್ಸಿನಲ್ಲಿ ಸಾರ್ವಜನಿಕ ಸೇವೆಗೆ ಶಪಥ
* 1942ರಲ್ಲಿ ಮಹಾರಾಣಿಯ ಮದುವೆ: 2,500 ಉಡುಗೊರೆಗಳು ಬಂದಿದ್ದವು.
* 7 ದಶಕದಲ್ಲಿ 15 ಮಂದಿ ಪ್ರಧಾನಿಗಳ ಬದಲಾಗಿದ್ದು, ಒಬ್ಬಳೇ ರಾಣಿ
* ವಿಭಿನ್ನ ಉಡುಪುಗಳನ್ನು ಬದಲಿಸಲು ಈ ರಾಣಿ ಫೇಮಸ್
* ಸುಮಾರು 72 ವರ್ಷ ಸುದೀರ್ಘ ಆಳ್ವಿಕೆ ನೀಡಿದ್ದ ಎಲಿಜಬೆತ್