ಬೆಂಗಳೂರು: ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಇಂದು ‘ಈದ್ ಮಿಲಾದ್’ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವರ ಜೀವನಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ. ಈ ಬಾರಿ ಈದ್ ಮಿಲಾದ್ಅನ್ನು ಕೋವಿಡ್-19 ಕಾರಣ ಸರ್ಕಾರದ ಮಾರ್ಗಸೂಚಿಯಂತೆ ಮಸೀದಿ, ದರ್ಗಾ ಹಾಗೂ ಇನ್ನಿತರ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೇ ಸರಳವಾಗಿ ಆಚರಿಸುವಂತೆ ವಕ್ಫ್ ಇಲಾಖೆ ಸೂಚಿಸಿದೆ.
ಇಂದು ‘ಈದ್ ಮಿಲಾದ್’. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿನ್ದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಆನಂದ್ ಸಿಂಗ್, ಡಿಸಿಎಂ ಗೋನಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಶುಭಾಶಯ ಕೋರಿದ್ದಾರೆ.
‘ಈದ್ ಮಿಲಾದ್’: ಮೋದಿ ಶುಭಾಶಯ
ಇಂದು ‘ಈದ್ ಮಿಲಾದ್’ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ‘ಮಿಲಾದ್-ಉನ್-ನಬಿ ದಿನದ ಶುಭಾಶಯಗಳು. ಈ ದಿನವು ಕರುಣೆ ಮತ್ತು ಸಹೋದರತ್ವ ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ. ಈದ್ ಮುಬಾರಕ್’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
Best wishes on Milad-un-Nabi. Hope this day furthers compassion and brotherhood all across. May everybody be healthy and happy. Eid Mubarak!
— Narendra Modi (@narendramodi) October 30, 2020
ನಾಡಿನ ಮುಸ್ಲಿಮ್ ಬಂಧುಗಳಿಗೆ ಈದ್-ಮಿಲಾದ್ ಶುಭಕೋರಿದ ಸಿದ್ದರಾಮಯ್ಯ:
ಸಿದ್ದರಾಮಯ್ಯ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಾಧನೆ, ಬೋಧನೆ, ಸಮಾನತೆ ಸೌಹಾರ್ದತೆಯ ಸಮಾಜವನ್ನು ಕಟ್ಟುವ ನಮ್ಮ ಕೈಗಳಿಗೆ ಇನ್ನಷ್ಟು ಬಲ ತಂದು ಕೊಡಲಿ. ನಾಡಿನ ಎಲ್ಲ ಮುಸ್ಲಿಮ್ ಬಂಧುಗಳಿಗೆ ಈದ್-ಮಿಲಾದ್ ಶುಭಾಶಯಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರವಾದಿ ಮಹಮ್ಮದ್ ಪೈಗಂಬರರ
ಬೋಧನೆ ಮತ್ತು ಸಾಧನೆ ಸಮಾನತೆ-ಸೌಹಾರ್ದತೆಯ ಸಮಾಜವನ್ನು ಕಟ್ಟುವ ನಮ್ಮ ಕೈಗಳಿಗೆ ಇನ್ನಷ್ಟು ಬಲ ತಂದು ಕೊಡಲಿ.ನಾಡಿನ ನನ್ನೆಲ್ಲ
ಮುಸ್ಲಿಮ್ ಬಂಧುಗಳಿಗೆ ಈದ್-ಮಿಲಾದ್ ಶುಭಾಶಯಗಳು. pic.twitter.com/Tl2wB7ZjbN— Siddaramaiah (@siddaramaiah) October 30, 2020