Nandini products | ಭಾರತದ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದಿರುವ ಕರ್ನಾಟಕದ ನಂದಿನಿ (KMF) ಶೀಘ್ರದಲ್ಲೇ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ, ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರ ಹಾಲು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಕಾಣುವ ನಿರೀಕ್ಷೆ ಇದೆ.
ಜಿಎಸ್ಟಿ ಕಡಿತದ ಪರಿಣಾಮ
ಇತ್ತೀಚೆಗೆ ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು ಶೇ. 12ರಿಂದ 5ಕ್ಕೆ ಇಳಿಸಿದೆ. ಈ ನಿರ್ಧಾರವು ದೇಶದಾದ್ಯಂತ ಹಾಲು ಉತ್ಪಾದನಾ ಹಾಗೂ ವಿತರಣೆ ಸಂಸ್ಥೆಗಳಿಗೆ ಬೆಲೆ ಪರಿಷ್ಕರಣೆ ಮಾಡಲು ಅವಕಾಶ ನೀಡಿದೆ. ಇದರಂತೆ, ಮದರ್ ಡೈರಿ ಸೇರಿದಂತೆ ಹಲವಾರು ಸಂಸ್ಥೆಗಳು ತಮ್ಮ ಉತ್ಪನ್ನಗಳ ದರಗಳನ್ನು ಕಡಿಮೆ ಮಾಡಿವೆ. ಇದೇ ಹಾದಿಯಲ್ಲಿ ನಂದಿನಿ ಸಹ ಗ್ರಾಹಕರಿಗೆ ಅನುಕೂಲವಾಗುವ ನಿರ್ಧಾರಕ್ಕೆ ಮು೦ದಾಗಿದೆ.
ಬೆಲೆಯಲ್ಲಿ ಬದಲಾವಣೆ
2025ರ ಏಪ್ರಿಲ್ನಲ್ಲಿ ಪ್ರತಿ ಲೀಟರ್ ಹಾಲಿಗೆ & ಮೊಸರಿನ ಪ್ಯಾಕೆಟ್ಗಳಿಗೆ 4 ರೂ. ಏರಿಕೆ ಮಾಡಲಾಗಿತ್ತು. ಆದರೆ, ಜಿಎಸ್ಟಿ ಕಡಿತದ ಪರಿಣಾಮವಾಗಿ ಈಗ ಇದೇ 4 ರೂ. ಯನ್ನು ಮತ್ತೆ ಕಡಿತಗೊಳಿಸಲಿದೆ. ಇದರಿ೦ದ ಬಡ & ಮಧ್ಯಮ ವರ್ಗದ ಕುಟು೦ಬಗಳಿಗೆ ನೇರವಾಗಿ ಆರ್ಥಿಕ ಲಾಭವಾಗಲಿದೆ.
ಮುಂದಿನ ಹೆಜ್ಜೆಗಳು
ಸೆಪ್ಟೆಂಬರ್ 20 ರಂದು ಕೆಎಂಎಫ್ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ದರ ಇಳಿಕೆಯ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿದ್ದು, ನಿರ್ಧಾರ ಕೈಗೊಂಡ ತಕ್ಷಣವೇ ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿಯಾಗಬಹುದು.




