ದುಬೈ: ಕಿಂಗ್ಸ್ ಪಂಜಾಬ್ ತಂಡದ ಸಹ ಮಾಲೀಕ ನಟಿ ಪ್ರೀತಿ ಜಿಂಟಾ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವ ಹಿನ್ನಲೆ ದುಬೈನಲ್ಲಿದ್ದಾರೆ. ಐಪಿಎಲ್ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣಗಳಲ್ಲಿ ನಡೆಯುತ್ತಿದೆ. ಕರೋನಾಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಸಿಸಿಐ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಕೋವಿಡ್ ಸೋಂಕಿಗೆ ಒಳಗಾಗದಂತೆ ತಡೆಯಲು ಎಲ್ಲಾ ಆಟಗಾರರನ್ನು ಜೈವಿಕ ಗುಳ್ಳೆಯಲ್ಲಿ ಇರಿಸಲಾಗಿದೆ.
ಈ ನಿಟ್ಟಿನಲ್ಲಿ ನಟಿ ಪ್ರೀತಿ ಜಿಂಟಾ ಅವರು ಮಂಗಳವಾರ ಪೋಸ್ಟ್ ಮಾಡಿದ ವಿಡಿಯೋ ಪ್ರಸ್ತುತ ವೈರಲ್ ಆಗಿದೆ. ಅದರಲ್ಲಿ ಪ್ರೀತಿ ಜಿಂಟಾ ಸ್ವ್ಯಾಬ್ ಪರೀಕ್ಷೆ ಒಳಗಾಗಿದ್ದು, ವೈದ್ಯಕೀಯ ಸಿಬ್ಬಂದಿಯೊಬ್ಬರು ಸ್ವ್ಯಾಬ್ ಸಂಗ್ರಹಿಸಿತ್ತಿರುವುದು ನೋಡಬಹುದು. ಈ ಸಂದರ್ಭದಲ್ಲಿ ಪ್ರೀತಿ ಜಿಂಟಾ ಅವರು ‘ಇದು ನನ್ನ 20 ನೇ ಕೋವಿಡ್ ಪರೀಕ್ಷೆ’ ಎಂದು ಹೇಳಿದ್ದು, ನಾನು ಕರೋನಾ ಪರೀಕ್ಷೆಗಳ ರಾಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ನಟಿ ಪ್ರೀತಿ ಜಿಂಟಾ ಅವರು ಬಯೋ ಬಬಲ್(ಜೈವಿಕ ಗುಳ್ಳೆ) ಬಗ್ಗೆಯೂ ವಿವರಿಸಿದ್ದು, ಈ ಬಗ್ಗೆ ಪ್ರೀತಿ ಜಿಂಟಾ ಬಯೋ ಬಬಲ್ ಎಂದರೇನು ಎಂದು ಬಹಳಷ್ಟು ಜನರು ನನ್ನನ್ನು ಕೇಳುತ್ತಿದ್ದಾರೆ. ಆರು ದಿನಗಳ ಕ್ವಾರಂಟೈನ್, ನಾಲ್ಕು ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು, ನಮಗೆ ನಿಗದಿಪಡಿಸಿದ ಕೋಣೆಗೆ ಸೀಮಿತವಾಗುವುದು. ತಂಡಕ್ಕೆ ನಿಯೋಜಿಸಲಾದ ರೆಸ್ಟೋರೆಂಟ್, ಜಿಮ್ ಮತ್ತು ಕ್ರೀಡಾಂಗಣವನ್ನು ಮಾತ್ರ ಬಳಸುವುದು ಜೈವಿಕ ಗುಳ್ಳೆ (ಬಯೋ ಬಬಲ್) ಎಂದು ವಿವರಿಸಿದ್ದಾರೆ.
ಬಿಸಿಸಿಐ ಮತ್ತು ಕಿಂಗ್ಸ್ ಪಂಜಾಬ್ ಸಿಬ್ಬಂದಿಗೆ ಧನ್ಯವಾದಗಳು. “ನಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ಐಪಿಎಲ್ ಅನ್ನು ಸುರಕ್ಷಿತವಾಗಿ ಮುಂದುವರಿಸಲು ಅವರು ಕಷ್ಟಪಡುತ್ತಿದ್ದಾರೆ ” ಎಂದು ನಟಿ ಪ್ರೀತಿ ಜಿಂಟಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ನೀರ್ ದೋಸೆ ನಿರ್ದೇಶಕರ ‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯ!