ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಅಮೇರಿಕಾದ ಪಾಪ್ ಗಾಯಕಿ ರಿಹಾನಾ ಮಾಡಿರುವ ಟ್ವೀಟ್ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಸೆಲೆಬ್ರಿಟಿಗಳ ಪರ ವಿರೋಧದ ಟ್ವೀಟ್ ವಾರ್ ಕೂಡ ಜೋರಾಗುತ್ತಲಿದೆ.
ಇದಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ತಾಪ್ಸಿ ಪನ್ನು ಕೂಡ ಟ್ವೀಟ್ ಮಾಡಿದ್ದೂ, ಇದೀಗ ಸಂಸದ ಪ್ರತಾಪ್ ಸಿಂಹ ಅವರು ನಟಿ ತಾಪ್ಸೀಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರು, ‘ಒಬ್ಬ ರಶ್ದೀಯಿಂದ ಮುಸ್ಲೀಮರು ಅಲ್ಲಾಡಿದರು, ಒಂದು ಪುಸ್ತಕ ಕ್ರಿಶ್ಚಿಯನ್ನರನ್ನು ಅಲ್ಲಾಡಿಸಿತು. ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್‌ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ತಾಪ್ಸಿ ಪನ್ನು ಅವರು ‘ ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಕೆರಳಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆ ಕೆರಳಿಸುವುದಾದರೆ ಅಥವಾ ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಕೆರಳಿಸುವುದಾದರೆ? ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಿ, ಉಳಿದವರಿಗೆ ಪಾಠ ಮಾಡಬೇಡಿ’ ಎಂದು ಟ್ವೀಟ್ ಮಾಡಿದ್ದರು. ನಟಿ ತಾಪ್ಸಿ ಪನ್ನು ಅವರ ಈ ಟ್ವೀಟ್ ಗೆ ಸಾಮಾಜಿಕ ಮಾದ್ಯಮದಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿವೆ.
Oh Taapsee, One Rushdie rattled entire Indian Muslims, One cartoon rattled Muslims world over, One book “The da Vinci Code” stirred Christians all over, You broke the marriage coz of one Thappad. Pls limit urself2 scripted film dialogues, rest of d things r beyond your knowledge. https://t.co/IsQHCM9ql9
— Pratap Simha (@mepratap) February 5, 2021