ಉಚಿತ ವಿದ್ಯುತ್‌ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ; ಉದ್ದೇಶ, ಪ್ರಯೋಜನಗಳು, ಅರ್ಜಿ ಸಲ್ಲಿಕೆ

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ : ಭಾರತದಲ್ಲಿ ವಿದ್ಯುತ್‌ ಸಂಪರ್ಕದ ವೆಚ್ಚ ಹೆಚ್ಚಿರುವ ಕಾರಣ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಈ ವೆಚ್ಚವನ್ನು ಭರಿಸಲು ಶಕ್ತರಾಗಿಲ್ಲ. ಇಂದಿಗೂ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಇವುಗಳನ್ನು ಗಮನದಲ್ಲಿಟ್ಟುಕೊಂಡು…

Pradhan mantri saubhagya yojana

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ : ಭಾರತದಲ್ಲಿ ವಿದ್ಯುತ್‌ ಸಂಪರ್ಕದ ವೆಚ್ಚ ಹೆಚ್ಚಿರುವ ಕಾರಣ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಈ ವೆಚ್ಚವನ್ನು ಭರಿಸಲು ಶಕ್ತರಾಗಿಲ್ಲ. ಇಂದಿಗೂ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ ( pradhan mantri saubhagya yojana) ಆರಂಭಿಸಲಾಗಿದೆ. ಇದನ್ನು ಸೌಭಾಗ್ಯ ಯೋಜನೆ ಎಂದೂ ಕರೆಯಲಾಗುತ್ತದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಹಾಗೂ ಇತರೆ ಕುಟುಂಬಗಳಿಗೆ 10 ಮಾಸಿಕ ಕಂತುಗಳಲ್ಲಿ ತಲಾ ₹50ರಂತೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಸೌಭಾಗ್ಯ (ಸಹಜ್ ಹರ್ ಘರ್ ಬಿಜ್ಲಿ) ಯೋಜನೆಯ ಉದ್ದೇಶ (Purpose of pradhan mantri saubhagya yojana)

Pradhan mantri saubhagya yojana
Pradhan mantri saubhagya yojana

ಕೇಂದ್ರ ಸರ್ಕಾರವು ಪ್ರತಿ ಮನೆಗೂ ಸುಲಭವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ ಆರಂಭಿಸಿದೆ. ವಿದ್ಯುತ್ ನಿಂದಾಗಿ ಹಲವು ಪ್ರದೇಶಗಳ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ವಿದ್ಯುತ್ ಲಭ್ಯವಿಲ್ಲದ ಪ್ರದೇಶಗಳಿಗೆ ವಿದ್ಯುತ್ ಒದಗಿಸಿ ಪ್ರತಿಯೊಂದು ಪ್ರದೇಶದ ಅಭಿವೃದ್ಧಿ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಜೊತೆಗೆ ರೈತರ ಕೊಳವೆಬಾವಿ ಸಂಬಂಧಿತ ಸಮಸ್ಯೆಗಳನ್ನು ಕೂಡ ಪರಿಹರಿಸಲಾಗುತ್ತದೆ. ಇದರಿಂದ ಕೃಷಿ ಉತ್ಪಾದನೆ ಕೂಡ ಹೆಚ್ಚಾಗಿ ರೈತರ ಆರ್ಥಿಕ ಸ್ಥಿತಿಯನ್ನು ಸಹ ಬಲಪಡಿಸಬಹುದು.

ಇದನ್ನು ಓದಿ: NALCO Recruitment | NALCO ದಲ್ಲಿ 518 ವಿವಿಧ ಹುದ್ದೆಗಳಿಗೆ ನೇಮಕಾತಿ

Vijayaprabha Mobile App free

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ? (pradhan mantri saubhagya yojana application)

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಆರಂಭಿಸಲಾದ ‘ಇ-ಸಂಯೋಜನ್’ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು, ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ಪಡೆಯುವ ಏನ್ರೋಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಮುಂದಿನ ಕೆಲಸಗಳಿಗೆ ಬಳಸಬಹುದು. ಮತ್ತೊಮ್ಮೆ ಸೈನ್ ಇನ್ ಪ್ರಕ್ರಿಯೆಯ ಮೇಲೆ ಕ್ಲಿಕ್ ಮಾಡಿದರೆ ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ರೀತಿಯಾಗಿ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Udyogini yojana | ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಉಚಿತ ಲೋನ್ ಹೇಗೆ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯ ಪ್ರಯೋಜನಗಳು (Benefits of pradhan mantri saubhagya yojana)

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಿಂದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ. ಈ ಯೋಜನೆಯಡಿ, ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ವಿದ್ಯುತ್ ಸೌಲಭ್ಯದ ಪ್ರಯೋಜನ ಪಡೆಯುತ್ತಾರೆ. ದೇಶದ ನಗರ ಮತ್ತು ಗ್ರಾಮೀಣ ಜನರು ಈ ಯೋಜನೆಯಡಿ ವಿದ್ಯುತ್ ಸಂಬಂಧಿತ ಯೋಜನೆಗಳನ್ನು ಪಡೆಯಬಹುದಾಗಿದ್ದು, ಈ ಯೋಜನೆ ಅಡಿಯಲ್ಲಿ ವಿದ್ಯುತ್ ಸೌಲಭ್ಯಗಳನ್ನು ಒದಗಿಸಲು ತೊಂದರೆಗಳಿದ್ದಲ್ಲಿ, ಪ್ರಧಾನಮಂತ್ರಿ ಅವರು ಈ ಯೋಜನೆಯಡಿ ಸೌರ ಸೌಲಭ್ಯವನ್ನು ಒದಗಿಸುತ್ತಾರೆ ಮತ್ತು ನಂತರ ಅಲ್ಲಿನ ಅಭಿವೃದ್ಧಿ ಕೊಡುಗೆ ನೀಡುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.