ರಾಜ್ಯದಲ್ಲಿನ ಅತಿ ಬಡ & ಶ್ರೀಮಂತ ಜಿಲ್ಲೆಗಳು:
ಅತ್ಯಂತ ಬಡ ಜಿಲ್ಲೆಗಳು
ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕ (MPI) 2024ರ ವರದಿ ಪ್ರಕಾರ, ಕಲ್ಯಾಣ-ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ರಾಜ್ಯದಲ್ಲಿಯೇ ಅತ್ಯಂತ ಬಡ ಜಿಲ್ಲೆಗಳಾಗಿವೆ.ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕ (MPI) 2024ರ ವರದಿ ಪ್ರಕಾರ, ಕಲ್ಯಾಣ-ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ರಾಜ್ಯದಲ್ಲಿಯೇ ಅತ್ಯಂತ ಬಡ ಜಿಲ್ಲೆಗಳಾಗಿವೆ ಎಂದು ತಿಳಿಸಿದೆ.
ಇನ್ನೂ ಸುಧಾರಿಸದ ಯಾದಗಿರಿ
ನೀತಿ ಆಯೋಗ ವರದಿ ಪ್ರಕಾರ, 2015-16 ರಲ್ಲಿ ಯಾದಗಿರಿಯು ಶೇ. 16.3ರಷ್ಟು ಸುಧಾರಿಸಿದ್ದು, 2019-21 ರಲ್ಲಿ ಮತ್ತೆ ಅತಿ ಬಡ ಜಿಲ್ಲೆಯಾಗಿ ಉಳಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಬಡತನವು ಶೇಕಡಾ 2.47 ರಷ್ಟು ಕುಸಿತ ಕಂಡಿದೆ.
ಟಾಪ್ 3 ಶ್ರೀಮಂತ ಜಿಲ್ಲೆಗಳು
ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಶ್ರೀಮ೦ತಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ₹7,60,362 ತಲಾ ಆದಾಯ ಹೊಂದಿದೆ. 2 ಸ್ಥಾನದಲ್ಲಿ ದಕ್ಷಿಣ ಕನ್ನಡ (ತಲಾ ಆದಾಯ- ₹4,92,074) ಇನ್ನೂ ಮೂರನೇ ಸ್ಥಾನದಲ್ಲಿ ಉಡುಪಿ (ತಲಾ ಆದಾಯ – ₹4,54,274)ಇದೆ.
ಸರ್ಕಾರದ ಕಾರ್ಯಕ್ರಮ
ರಾಜ್ಯದ ಬಡತನ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ‘ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮವನ್ನು’ ಅನುಷ್ಠಾನಗೊಳಿಸಿದೆ. ಈ ಯೋಜನೆಯು 2027ರ ವೇಳೆಗೆ 50,000 ಅತ್ಯಂತ ಬಡ ಕುಟುಂಬಗಳಿಗೆ & 2029 ರ ವೇಳೆಗೆ
2,50,000 ಕುಟುಂಬಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ.
2 ಲಕ್ಷದೊಳಗಿನ ತಲಾ ಆದಾಯ
ತಲಾ ಆದಾಯ ಲೆಕ್ಕದಲ್ಲಿ ನೋಡುವುದಾದರೆ, ಕಲಬುರಗಿ- ₹1,39,361, ಬೆಳಗಾವಿ- ₹1,49,710, – ₹1,52,141, ಕೊಪ್ಪಳ -₹1,52,489, 8-₹1,53,247, ಹಾವೇರಿ- ₹1,57,931, ವಿಜಯನಗರ- ₹1,59,868, ರಾಯಚೂರು – ₹1,64,705, ವಿಜಯಪುರ – ₹1,69,253, ಗದಗ – ₹1,69,704, 23-₹1,77,777, ಕೋಲಾರ- ₹1,87,284, ದಾವಣಗೆರೆ- ₹1,93,151 ತಲಾ ಆದಾಯವನ್ನು ಹೊಂದಿವೆ.
2 ಲಕ್ಷ ಮೇಲ್ಪಟ್ಟ ತಲಾ ಆದಾಯ
ಚಿಕ್ಕಬಳ್ಳಾಪುರ- ₹2,00,424, ಚಾಮರಾಜನಗರ- ₹2,02,494, ಮೈಸೂರು- ₹2,15,398, ಉತ್ತರ ಕನ್ನಡ – ₹2,20,984, ಬಾಗಲಕೋಟೆ- ₹2,26,482, ಧಾರವಾಡ- ₹2,31,939, ಮಂಡ್ಯ – ₹2,37,220, ಹಾಸನ – ₹2,38,029, ತುಮಕೂರು – ₹2,45,735, ರಾಮನಗರ – ₹2,49,998, ៨- ₹2,60,558, ໙- ₹2,78,538, ಶಿವಮೊಗ್ಗ- ₹2,90,893, ಬೆಂಗಳೂರು ಗ್ರಾ. ₹2,91,083, ಚಿಕ್ಕಮಗಳೂರು -₹3,77,968, ಉಡುಪಿ – ₹4,54,274, ದಕ್ಷಿಣ ಕನ್ನಡ – ₹4,92,074, ಬೆಂಗಳೂರು ನಗರ – ₹7,60,362
ಬಿಹಾರ ಅತಿ ಬಡ ರಾಜ್ಯ
ದೇಶದಲ್ಲಿ ಬಿಹಾರ 51.9% ರಷ್ಟು ಬಡತನ ಹೊಂದಿದ್ದು, ಅತ್ಯಂತ ಬಡ ರಾಜ್ಯವಾಗಿದೆ. ಜಾರ್ಖ೦ಡ್ 42.16% ರಷ್ಟು ಬಡತನ ಹೊಂದಿದ್ದು, 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ (37.79%) & ಮಧ್ಯಪ್ರದೇಶ (36.65%) 3 & 4 ನೇ ಸ್ಥಾನವನ್ನು ಪಡೆದುಕೊಂಡಿವೆ. ಕರ್ನಾಟಕದಲ್ಲಿ ಶೇ.13.16 ರಷ್ಟುಬಡತನವಿದೆ.