PM Vishwakarma Yojana: ದಿನಕ್ಕೆ 500 ರೂ, 15,000 ಸ್ಟೈಫಂಡ್, 3 ಲಕ್ಷ ರೂಗಳವರೆಗೆ ಸಾಲ ಸೌಲಭ್ಯ

PM Vishwakarma Yojana: ಕೇಂದ್ರ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ (PM Vishwakarma Yojana) ಒಂದಾಗಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2023…

PM Vishwakarma Yojana

PM Vishwakarma Yojana: ಕೇಂದ್ರ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ (PM Vishwakarma Yojana) ಒಂದಾಗಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಿದ ಪಿಎಂ ವಿಶ್ವಕರ್ಮ ಯೋಜನೆಯಡಿ ಬಡಿಗ, ದೋಣಿ ತಯಾರಕರು, ಕುಂಬಾರರು, ಕಮ್ಮಾರರು, ಅಕ್ಕಸಾಲಿಗರು, ಶಿಲ್ಪಿಗಳು, ಕ್ಷೌರಿಕರು, ರಾಜಮೇಸ್ತ್ರಿಗಳು, ಮೀನಿನ ಬಲೆ ತಯಾರಕರು & ಇತರೆ ಕುಶಲಕರ್ಮಿಗಳು ಸೇರಿದಂತೆ 18 ವಿವಿಧ ವ್ಯಾಪಾರಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುತ್ತದೆ.

ಇನ್ನು, ಈ ಯೋಜನೆಯಡಿ, ಅರ್ಹ ಅಭ್ಯರ್ಥಿಗಳಿಗೆ 5-7 ದಿನಗಳ ತರಬೇತಿ, ದಿನಕ್ಕೆ 500 ರೂ. ಸ್ಟೈಫಂಡ್, 15,000 ರೂ. ಟೂಲ್‌ಕಿಟ್ ಪ್ರೋತ್ಸಾಹ ಮತ್ತು 5% ರಿಯಾಯಿತಿ ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ‘ಉದ್ಯಮ ಅಭಿವೃದ್ಧಿ ಸಾಲ’ ನೀಡಲಾಗುತ್ತದೆ. ಸಾಲ ಪಡೆಯಲು ಮೊಬೈಲ್ ಮತ್ತು ಆಧಾರ್ ಪರಿಶೀಲನೆ, ತರಬೇತಿ ಪೂರ್ಣಗೊಳಿಸುವುದು ಮತ್ತು ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಅಗತ್ಯ. ಆಸಕ್ತರು ವೇಬ್‌ಸೈಟ್‌ pmvishwakarma.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.