PM RAHAT Scheme : ರಸ್ತೆ ಅಪಘಾತವಾದರೆ ಇನ್ಮುಂದೆ ಆಸ್ಪತ್ರೆ ಬಿಲ್ ಕಟ್ಟಬೇಕಿಲ್ಲ! ಕೇಂದ್ರದ ‘PM RAHAT’ ಯೋಜನೆಯಡಿ 1.5 ಲಕ್ಷದವರೆಗೆ ಉಚಿತ ಮತ್ತು ನಗದು ರಹಿತ ಚಿಕಿತ್ಸೆ ಸಿಗಲಿದೆ. 7 ದಿನಗಳವರೆಗೆ ‘ಝೀರೋ ಬಿಲ್’ ಸೌಲಭ್ಯದ ಮಾಹಿತಿ ಇಲ್ಲಿದೆ.”
ಹೌದು, ಇನ್ಮುಂದೆ ರಸ್ತೆ ಅಪಘಾತವಾದಾಗ (Road Accident) ಅಯ್ಯೋ ಆಸ್ಪತ್ರೆಗೆ ಎಷ್ಟು ಖರ್ಚಾಗುತ್ತೋ? ಎಂದು ಭಯಪಡುವ ಅಗತ್ಯವಿಲ್ಲ. ಸಂತ್ರಸ್ತರ ಪ್ರಾಣ ಉಳಿಸಲು ಕೇಂದ್ರ ಸರ್ಕಾರ ‘PM RAHAT’ ಎಂಬ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ನಗದು ರಹಿತ (Cashless) ಚಿಕಿತ್ಸೆ ಸಿಗಲಿದೆ.
ಈ ಯೋಜನೆಯ 4 ಪ್ರಮುಖ ಲಾಭಗಳು ಇಲ್ಲಿವೆ.

1. 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ (Free Treatment)
ಅಪಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ಸೇರಿದರೆ, ಗರಿಷ್ಠ ₹1.5 ಲಕ್ಷದವರೆಗಿನ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಗಾಯಾಳುಗಳು ಅಥವಾ ಅವರ ಕುಟುಂಬದವರು ಆಸ್ಪತ್ರೆಗೆ ಒಂದು ರೂಪಾಯಿ ಹಣ ಪಾವತಿಸುವ ಅಗತ್ಯವಿಲ್ಲ.
2. 7 ದಿನಗಳವರೆಗೆ ‘0’ ಬಿಲ್!
ಅಪಘಾತವಾದ ದಿನದಿಂದ ಮುಂದಿನ 7 ದಿನಗಳವರೆಗೆ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಗೆ ಈ ಯೋಜನೆ ಅನ್ವಯವಾಗಲಿದ್ದು, ಇದು ತುರ್ತು ಸಂದರ್ಭದಲ್ಲಿ (ICU, Operation) ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವರದಾನವಾಗಲಿದೆ.
3. ‘ಗೋಲ್ಡನ್ ಅವರ್’ ಮಹತ್ವ (Golden Hour)
ಅಪಘಾತವಾದ ಮೊದಲ 1 ಗಂಟೆಯನ್ನು ‘ಸುವರ್ಣ ಅವಧಿ’ ಅಥವಾ ಗೋಲ್ಡನ್ ಅವರ್ ಎನ್ನುತ್ತಾರೆ. ಈ ಸಮಯದಲ್ಲಿ ಹಣದ ಚಿಂತೆ ಮಾಡಿ ಚಿಕಿತ್ಸೆ ತಡವಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಹಣವಿಲ್ಲದಿದ್ದರೂ ತಕ್ಷಣ ಚಿಕಿತ್ಸೆ ಆರಂಭಿಸಿ ಜೀವ ಉಳಿಸುವುದು ಇದರ ಮುಖ್ಯ ಗುರಿ.
4. ಇದು ಎಲ್ಲರಿಗೂ ಅನ್ವಯ!
ಇನ್ನು, ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ ಅಥವಾ ಯಾವುದೇ ರಸ್ತೆಯಲ್ಲಿ ಅಪಘಾತಕ್ಕೀಡಾದ ಎಲ್ಲಾ ಸಂತ್ರಸ್ತರಿಗೂ ಅನ್ವಯವಾಗಲಿದ್ದು, ಇದಕ್ಕಾಗಿ ವಿಶೇಷವಾಗಿ ನೊಂದಣಿ ಮಾಡಿಸುವ ಅಗತ್ಯವಿಲ್ಲ.
PM Kisan 22nd Installment: ಕಾಯುವಿಕೆ ಅಂತ್ಯ! ಈ ದಿನ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ.




