ನವಡೆಶಾಲಿ: ಕಾಂಗ್ರೆಸ್ ಪಕ್ಷ ದೇಶವನ್ನು 50 ವರ್ಷ ಆಳಿತ್ತು. ಆದರೂ ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣಕ್ಕೆ ಕಾಂಗ್ರೆಸ್ ಪಕ್ಷವೇ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿತ್ತು. ಆದರೂ ಅಲ್ಲಿನ ಜನ ಕಾಂಗ್ರೆಸ್ ತಿರಸ್ಕರಿಸಿದರು. ಇಲ್ಲಿ ಚುನಾವಣಾ ಫಲಿತಾಂಶ ಮುಖ್ಯವಲ್ಲ, ಜನರ ಉದ್ದೇಶ ಏನಿರಬಹುದು ಎಂಬುದೇ ಮುಖ್ಯ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್, ಎಎಪಿ ವಿರುದ್ಧ ಪ್ರಧಾನಿ ಮೋದಿ ಕಿಡಿ
ಇನ್ನು, ಕೊರೋನಾ ಮೊದಲ ಅಲೆ ವೇಳೆ ಮುಂಬೈನಲ್ಲಿದ್ದ ವಲಸಿಗರು ತಮ್ಮ ಊರುಗಳಿಗೆ ತೆರಳಲು ನೀವು ಟಿಕೆಟ್ ವ್ಯವಸ್ಥೆ ಮಾಡಿದ್ದಿರಿ ಎಂದು ಪ್ರಧಾನಿ ಮೋದಿ ಇಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದು, ವೇಳೆಯಲ್ಲಿ ದೆಹಲಿ ಸರ್ಕಾರ ಕೂಡ ದೆಹಲಿ ತೊರೆಯುವಂತೆ ವಲಸಿಗರಿಗೆ ಸೂಚಿಸಿ, ಬಸ್ ವ್ಯವಸ್ಥೆ ಮಾಡಿತ್ತು. ಇದರ ಪರಿಣಾಮ ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕೊರೋನಾ ಶೀಘ್ರ ಹರಡಿತು ಎಂದು ಕಾಂಗ್ರೆಸ್, ಎಎಪಿ ವಿರುದ್ಧ ಕಿಡಿಕಾರಿದ್ದಾರೆ.