PM Kisan : ಬಹುನಿರೀಕ್ಷಿತ ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಈಗಾಗಲೇ ಬಿಡುಗಡೆಯಾಗಿದ್ದು, ಇಲ್ಲಿವರೆಗೆ 9.7 ಕೋಟಿ ರೈತರಿಗೆ 2,000 ರೂಪಾಯಿ ಜಮಾ ಆಗಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆ ಹಣ ಬಿಡುಗಡೆ ಮಾಡಿದ್ದು, ಇಲ್ಲಿಯವರೆಗೂ ದೇಶದಾತ್ಯಂತ ಬರೋಬ್ಬರಿ 9.7 ಕೋಟಿ ಅರ್ಹ ರೈತರಿಗೆ 2,000 ರೂಪಾಯಿಯನ್ನು ಪಿನೀಡಲಾಗಿದ್ದು, 20,500 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. pmkisan.gov.in ವೆಬ್‌ಸೈಟ್‌ಗೆ ವಿಸಿಟ್ ಮಾಡಿ, ಸ್ಟೇಟಸ್ ತಿಳಿಯಿರಿ.
ಪಿಎಂ ಕಿಸಾನ್ 20ನೇ ಕಂತಿನ ಹಣ ಬಂದಿಲ್ಲವಾ? ಈ ಕಾರಣಗಳಿರಬಹುದು
ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾವಣಿ ಮಾಡಿಕೊಂಡಿದ್ದರೂ ಇಕೆವೈಸಿ ಮಾಡದ ರೈತರಿಗೂ ಹಣ ಸಿಕ್ಕೋದಿಲ್ಲ. ಅಥವಾ ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಆಗದೇ ಹೋದರೂ ಹಣ ಬಂದಿರುವುದಿಲ್ಲ. ಆಧಾರ್ ಮೂಲಕ ಇಕೆವೈಸಿ ಜೊತೆಗೆ ಜಮೀನು ದಾಖಲೆಗಳನ್ನೂ ಕೂಡ ಮತ್ತೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಇದು ಮಾಡಿಲ್ಲದೇ ಹೋದರೆ ಕಿಸಾನ್ ಹಣ ಬರೋದಿಲ್ಲ. ಇನ್ನು ಪೋಷಕರು ಬದುಕಿರುವಾಗ, ಅವರಿಂದ ಜಮೀನು ವರ್ಗಾವಣೆಯಾಗಿ ಅದರ ಮಾಲಿಕತ್ವ ಹೊಂದಿರುವ ಮಕ್ಕಳಿಗೂ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ.
ಪಿಎಂ ಕಿಸಾನ್ ಹಣ ಬಂದಿಲ್ವಾ?: ಹೀಗೆ ದೂರು ನೀಡಿ
ಪಿಎಂ ಕಿಸಾನ್ ಯೋಜನೆಯಡಿ ಹಣ ಜಮೆಯಾಗದಿದ್ದರೆ, ರೈತರು ತಾವು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಟಿಪಿ, ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮೂಲಕ ಇದನ್ನು ಮಾಡಬಹುದು. ಪ್ರಕ್ರಿಯೆ ಪೂರ್ತಿಯಾದ ಬಳಿಕ ಬಾಕಿ ಸೇರಿದಂತೆ ಎಲ್ಲ ಕಂತುಗಳು ನಿಮ್ಮ ಖಾತೆಗೆ ಜಮೆಯಾಗಲಿದೆ. ಇನ್ನು ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದ್ದು ಹಣ ಜಮೆಯಾಗದಿದ್ದರೆ ಇಮೇಲ್: pmkisan-ict@gov.in / pmkisan-funds@gov.in, ಟೋಲ್ ಫ್ರೀ: 1800-115-526 ಗೆ ದೂರು ನೀಡಬಹುದು.




