PM Kisan : ನವೆಂಬರ್ 19, 2025 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂಪಾಯಿ ಜಮಾ ಆಗಿದೆ.
ಈ ಹಿಂದೆ ಆಗಸ್ಟ್‌ನಲ್ಲಿ 20ನೇ ಕಂತು 9.8 ಕೋಟಿ ರೈತರಿಗೆ ಬಿಡುಗಡೆಯಾಗಿತ್ತು. ರೈತರು pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ‘Know Your Status’ ಆಯ್ಕೆ ಬಳಸಿ, ಆಧಾರ್ ಸಂಖ್ಯೆ, ಪಿಎಂ-ಕಿಸಾನ್ ಐಡಿ ಅಥವಾ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ, ಜಮಾ ದಿನಾಂಕ ಮತ್ತು ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಬಹುದು.
PM ಕಿಸಾನ್ ಹಣ ಖಾತೆಗೆ ಬಂತಾ, ಇಲ್ವಾ? ಹೀಗೆ ಚೆಕ್ ಮಾಡಿ..!
ಪಿಎಂ ಕಿಸಾನ್ 21ನೇ ಕಂತಿನ ಹಣ ನಿನ್ನೆ ಬಿಡುಗಡೆಯಾಗಿದೆ. ದೇಶಾದ್ಯಂತ ಸುಮಾರು 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ ₹2,000 ರಂತೆ ಜಮಾ ಮಾಡಲಾಗಿದೆ. PM-KISAN ಪೋರ್ಟಲ್‌ನಲ್ಲಿ ಭೂ ವಿವರಗಳನ್ನು ನೋಂದಾಯಿಸಿರುವ, ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿರುವ ರೈತರಿಗೆ ಮಾತ್ರ ಈ ಯೋಜನೆಯ ಹಣ ಸಿಗುತ್ತದೆ. ಸದ್ಯ ನಿಮ್ಮ ಖಾತೆಗೆ ಹಣ ಬಂದಿದ್ದೀಯಾ? ಇಲ್ವಾ? ತಿಳಿಯಲು https://pmkisan.gov.in/ ಗೆ ಹೋಗಿ ಚೆಕ್ ಮಾಡಿ.




