ಜನೌಷಧʼಕ್ಕೆ ಫಾರ್ಮಸಿ ಲಾಬಿ ಬಿಸಿ; ಜನರಿಂದ ದೂರ ಆಗುತ್ತಿದೆ ಜನೌಷಧ..?

ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜನೌಷಧ ಕೇಂದ್ರದಲ್ಲಿ ಸರಿಯಾದ ಔಷಧಿಗಳೇ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಹೈ ಡಿಮ್ಯಂಡ್‌ ಇರುವ ಶುಗರ್‌, ಬಿಪಿ ಕಾಯಿಲೆಗಳಿಗೆ ಇಲ್ಲಿ ಔಷಧಿಗಳು ಲಭ್ಯವಿಲ್ಲ. 1650 ಔಷಧಗಳ ಪೈಕಿ ಕೇವಲ 650-700…

Janaushadhi kendra

ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜನೌಷಧ ಕೇಂದ್ರದಲ್ಲಿ ಸರಿಯಾದ ಔಷಧಿಗಳೇ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಹೈ ಡಿಮ್ಯಂಡ್‌ ಇರುವ ಶುಗರ್‌, ಬಿಪಿ ಕಾಯಿಲೆಗಳಿಗೆ ಇಲ್ಲಿ ಔಷಧಿಗಳು ಲಭ್ಯವಿಲ್ಲ.

1650 ಔಷಧಗಳ ಪೈಕಿ ಕೇವಲ 650-700 ಮೆಡಿಸಿನ್‌ಗಳು ಮಾತ್ರ ಲಭ್ಯವಿದೆ. ಈ ಕೇಂದ್ರಗಳಲ್ಲಿ ಕಡಿಮೆ ದುಡ್ಡಿಗೆ ಮಾತ್ರೆಗಳು ಸಿಗುವ ಕಾರಣದಿಂದ ಹೆಚ್ಚು ಬೇಡಿಕೆ ಇದೆ. ಆದರೆ ಮೆಡಿಕಲ್‌ ಲಾಬಿಯಿಂದ ಔಷಧಗಳ ಕೊರತೆ ಉಂಟಾಗಿದೆ ಅನ್ನುವ ಅನುಮಾನವಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚಿದೆ.

ಜನರಿಂದ ದೂರ ಆಗುತ್ತಿದೆ ಜನೌಷಧ..?

Vijayaprabha Mobile App free

ದೇಶದಲ್ಲಿ 8,675 PM ಭಾರತೀಯ ಜನೌಷಧಿ ಕೇಂದ್ರ ಯೋಜನೆ ಕೇಂದ್ರಗಳಿದ್ದು, ರಾಜ್ಯದಲ್ಲಿ 850ಕ್ಕೂ ಅಧಿಕ ಕೇಂದ್ರಗಳಿವೆ. ದೇಶವ್ಯಾಪಿ ವರ್ಷಕ್ಕೆ 680 ಕೋಟಿ ವಹಿವಾಟು ಆಗುತ್ತಿದ್ದು, ಕರ್ನಾಟಕದ ಪಾಲು 25% ಇದೆ.

ಪರಿಸ್ಥಿತಿ ಹೀಗಿರುವಾಗ ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳೇ ಲಭ್ಯವಾಗುತ್ತಿಲ್ಲ. ಈ ಮಾತ್ರೆಗಳಿಗೆ 10ರಲ್ಲಿ 7 ಜನರಿಂದ ಬೇಡಿಕೆ ಇದೆ. ಆದರೆ, ಇವುಗಳು 4 ತಿಂಗಳಿಗೊಮ್ಮೆ ಪೂರೈಕೆ ಆಗುತ್ತಿವೆ. ಇದರಿಂದ ಸಕಾಲಕ್ಕೆ ಔಷಧ ಸಿಗದೆ ಜನ ಪರದಾಡುವಂತಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.