ಕೋವಿಡ್ 19 ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು, ಅನೇಕ ದೇಶಗಳು ಇನ್ನೂ ಬಿಕ್ಕಟ್ಟಿನಿಂದ ತತ್ತರಿಸುತ್ತಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಕರೋನಾ ವೈರಸ್ ಕೂಡ ನಮ್ಮ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು, ಅಗತ್ಯ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ.
ಮತ್ತೆ ಈಗ ಕೋವಿಡ್ 19 ಪ್ರಕರಣಗಳ ಹೆಚ್ಚಳದೊಂದಿಗೆ ತೊಂದರೆ ಪ್ರಾರಂಭವಾಗಿದ್ದು,ಕೇಂದ್ರ ಸರ್ಕಾರವು 2020 ರ ವೇಳೆಗೆ ತೆರಿಗೆ-ಮುಕ್ತ ಮರುಪಾವತಿಸಲಾಗದ ಉದ್ಯೋಗಿಗಳ ಭವಿಷ್ಯ ನಿಧಿ (PF) ಕೋವಿಡ್ 19 ಮುಂಗಡ (Advanced) ಸೌಲಭ್ಯವನ್ನು ಒದಗಿಸಿದೆ. ಈ ಪ್ರಯೋಜನವು 2021 ರವರೆಗೂ ಮುಂದುವರೆದಿತ್ತು. ಕೋವಿಡ್ ಎರಡನೇ ಅಲೆ ಇದಕ್ಕೆ ಕಾರಣ. ಈ ಆಯ್ಕೆಯ ಅಡಿಯಲ್ಲಿ ಬಹಳಷ್ಟು ಮಂದಿ ಪಿಎಫ್ ಹಣವನ್ನು ಹಿಂಪಡೆದಿದ್ದಾರೆ.
ಮೋದಿ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ PMGKY ಅಡಿಯಲ್ಲಿ ಕರೋನಾ ಪಿಎಫ್ ಮುಂಗಡ ಸೌಲಭ್ಯ ಒದಗಿಸಿದೆ. ಈ ಸೌಲಭ್ಯವು ಮಾರ್ಚ್ 2020 ರಿಂದ ಲಭ್ಯವಿದ್ದು, ಮೇ 2021 ರಂತೆ, ಕೋವಿಡ್ 19 ಅಡ್ವಾನ್ಸ್ ಕ್ಲೈಮ್‌ಗಳ ಅಡಿಯಲ್ಲಿ ಇಪಿಎಫ್‌ಒ 18,698 ಕೋಟಿ ರೂ. ಬಿಡುಗಡೆ ಮಾಡಿದೆ. ಅಂದರೆ ಈ ಆಯ್ಕೆಯ ಅಡಿಯಲ್ಲಿ ಬಹಳಷ್ಟು ಜನರು ಪಿಎಫ್ ಹಣವನ್ನು ಹಿಂಪಡೆದಿದ್ದಾರೆ ಎಂದು ಹೇಳಬಹುದು.
ಮತ್ತು ಈಗ ಮೂರನೇ ಬಾರಿಗೆ ಕೋವಿಡ್ 19 ಅಡ್ವಾನ್ಸ್ ಆಯ್ಕೆಯ ಅಡಿಯಲ್ಲಿ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದೇ? ಎರಡು ಬಾರಿ ಹಣ ತೆಗೆದುಕೊಂಡವರು ತುಂಬಾ ಜನ ಇದ್ದಾರೆ. ಅಗಾದರೆ, ಮೂರನೇ ಬಾರಿ ತೆಗೆದುಕೊಳ್ಳಬಹುದೇ? ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ FAQ ವಿಭಾಗದ ಪ್ರಕಾರ, ಕೋವಿಡ್ 19 ಮುಂಗಡ ಕ್ಲೈಮ್‌ಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತಿರುವಂತೆ ತೋರುತ್ತಿದೆ. ಮೂರು ದಿನಗಳಲ್ಲಿ ಪಿಎಫ್ ಹಿಂಪಡೆಯುವ ವಿನಂತಿಗಳನ್ನು ಕ್ಲಿಯರ್ ಮಾಡುತ್ತಿದೆ. ಕೋವಿಡ್ ಮೂರನೇ ಅಲೆಯಿಂದಾಗಿ, ಕೇಂದ್ರ ಸರ್ಕಾರ ಮೂರನೇ ಬಾರಿಗೆ ಕೋವಿಡ್ 19 ಅಡ್ವಾನ್ಸ್ ರೂಪದಲ್ಲಿ ಪಿಎಫ್ ಹಣವನ್ನು ಮುಂಗಡ ಕ್ಲೈಮ್‌ಗಳನ್ನು ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.