ನೀವು ಉದ್ಯೋಗಿಯೇ? ಪಿಎಫ್ ಖಾತೆ ಇದೆಯೇ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆಯಿದ್ದು, 2020-21ರ ಹಣಕಾಸು ವರ್ಷದ ಶೇ .8.5 ರಷ್ಟು ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಇಪಿಎಫ್‌ಒ ಶೀಘ್ರದಲ್ಲೇ ಪ್ರಮುಖ ಪ್ರಕಟಣೆ ನೀಡುವ ಅವಕಾಶವಿದೆ ಎಂದು ಎನ್ನಲಾಗಿದೆ.
ಇಪಿಎಫ್‌ವಿಒ ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಅನುಮೋದನೆ ಪಡೆಯಬೇಕಾಗಿದ್ದು, ಕೇಂದ್ರದಿಂದ ಅನುಮೋದನೆ ಪಡೆದ ನಂತರ ಇಪಿಎಫ್‌ಒ ತನ್ನ ಚಂದಾದಾರರಿಗೆ ಸಿಹಿಸುದ್ದಿಯನ್ನು ನೀಡಲಿದ್ದು, ಇದರಿಂದ 6 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ.
ವರದಿಗಳ ಪ್ರಕಾರ, ಜುಲೈ ಅಂತ್ಯದ ವೇಳೆಗೆ 2020-21ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಒ ಶೇ .8.5 ರಷ್ಟು ಬಡ್ಡಿದರವನ್ನು ನೀಡಲಿದ್ದು, ಬಡ್ಡಿದರವನ್ನು ನೇರವಾಗಿ ಪಿಎಫ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
2019-20ರ ಆರ್ಥಿಕ ವರ್ಷಕ್ಕೆ ಬಡ್ಡಿ ಪಡೆಯಲು ಪಿಎಫ್ ಗ್ರಾಹಕರು 10 ತಿಂಗಳವರೆಗೆ ಕಾಯಬೇಕಾಯಿತು. ಆದರೆ, ಈ ಬಾರಿ ಬಡ್ಡಿಯ ಮೊತ್ತ ಜುಲೈ ಅಂತ್ಯದ ವೇಳೆಗೆ ಪಿಎಫ್ ಗ್ರಾಹಕರಿಗೆ ತಲುಪುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಇಷ್ಟೇ ಅಲ್ಲದೆ ಪಿಎಫ್ ಗ್ರಾಹಕರಿಗೆ ಕೇಂದ್ರ ಸರ್ಕಾರ, ಕೋವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಪಿಎಫ್ ಹಣವನ್ನು ಹಿಂತೆಗೆದುಕೊಳ್ಳುವ ನಿಯಮಗಳನ್ನು ಮತ್ತೆ ಪರಿಷ್ಕರಿಸಿದ್ದು, ಪಿಎಫ್ ಚಂದಾದಾರರು ಮತ್ತೆ ಕೋವಿಡ್ 19 ಆಯ್ಕೆಯಡಿ ಸುಲಭವಾಗಿ ಹಣವನ್ನು ಹಿಂಪಡೆಯಬಹುದು.