ನವದೆಹಲಿ: ದೇಶದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಕಳೆದ ತಿಂಗಳು ದಿನಗಳವರೆಗೆ ಏರಿಕೆಯಾಗದ ತೈಲ ಬೆಲೆ ಬುಧವಾರ ಏರಿಕೆಯಾಗಿದೆ. ನಿನ್ನೆ ಲೀಟರ್ ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ಬೆಲೆ 25 ಪೈಸೆ ಹೆಚ್ಚಾಗಿತ್ತು. ಕಂಪನಿಗಳು ಗುರುವಾರ ಮತ್ತೊಮ್ಮೆ ಲೀಟರ್ ಪೆಟ್ರೋಲ್ ಬೆಲೆ 23 ಪೈಸೆ ಮತ್ತು ಡೀಸೆಲ್ ಬೆಲೆ 26 ಪೈಸೆ ಹೆಚ್ಚಿಸಿವೆ.
ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 84.20 ರೂ.ಗೆ ಏರಿಯಾಗಿದ್ದು, ಬೆಂಗಳೂರಿನಲ್ಲಿ 87.04, ಕೋಲ್ಕತ್ತಾದಲ್ಲಿ 85.68 ರೂ, ಮುಂಬೈನಲ್ಲಿ 90.83 ರೂ, ಚೆನ್ನೈನಲ್ಲಿ 86.96 ರೂ, ಭುವನೇಶ್ವರದಲ್ಲಿ 84.68 ರೂ, ಹೈದರಾಬಾದ್ನಲ್ಲಿ 87.59 ಮತ್ತು ಜೈಪುರದಲ್ಲಿ 92.17 ರೂ. ಏರಿಕೆಯಾಗಿದೆ.
ಇನ್ನು ಲೀಟರ್ ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 74.38 ರೂ, ಬೆಂಗಳೂರಿನಲ್ಲಿ 78.87 ರೂ, ಕೋಲ್ಕತ್ತಾದಲ್ಲಿ 77.97 ರೂ, ಮುಂಬೈನಲ್ಲಿ 81.07, ಚೆನ್ನೈನಲ್ಲಿ 79.72, ಹೈದರಾಬಾದ್ನಲ್ಲಿ 81.17 ಮತ್ತು ಜೈಪುರದಲ್ಲಿ 84.14 ರೂ. ಏರಿಕೆಯಾಗಿದೆ.
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಕಳೆದ ಅಕ್ಟೋಬರ್ 4, 2018 ರಂದು ಪೆಟ್ರೋಲ್ ದರ 84 ರೂ. ಇತ್ತು, ಈಗ ಲೀಟರ್ ಪೆಟ್ರೋಲ್ ಬೆಲೆ 84.20 ರೂಗೆ ಏರಿಕೆಯಾಗಿದೆ.
ಇದನ್ನು ಓದಿ: ಮಹತ್ವದ ನಿರ್ಧಾರ: ಮೇ ನಲ್ಲಿ ದ್ವಿತೀಯ PUC, ಜೂನ್ ನಲ್ಲಿ SSLC ಪರೀಕ್ಷೆ; 1 ರಿಂದ 9 ರವರೆಗೆ ಪಠ್ಯ ಕಡಿತ ಇಲ್ಲ
ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ