ಬೆಂಗಳೂರು: ವಿವಿಧ ಕಾರಣದಿಂದಾಗಿ ಗೂಗಲ್ ಪ್ಲೇಸ್ಟೋರ್ ನಿಂದ ಹೊರ ಹಾಕಲ್ಪಟ್ಟಿದ್ದ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ Paytm (ಪೇಟಿಎಂ) ಈಗ ಮತ್ತೆ ಗೂಗಲ್ ಪ್ಲೇಸ್ಟೋರ್ ಗೆ ಸೇರ್ಪಡೆಯಾಗಿದೆ.
ಕೆಲವು ಜೂಜು ಮತ್ತು ಬೆಟ್ಟಿಂಗ್ ಸಂಬಂಧಿತ ಆಟಗಳನ್ನು ಉತ್ತೇಜಿಸುತ್ತದೆ ಎಂಬ ಕಾರಣಕ್ಕಾಗಿ ಹಾಗೂ ಗೂಗಲ್ ಪ್ಲೇ ಸ್ಟೋರ್‌ನ ನಿಯಮ ಪಾಲಿಸದ ಕಾರಣಕ್ಕಾಗಿ ಪೇಟಿಎಂ ಆ್ಯಪ್ ಅನ್ನು ತೆಗೆದುಹಾಕಲಾಗಿತ್ತು. ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್‌ಗಳ ಪೈಕಿ ಮುಂಚೂಣಿಯಲ್ಲಿರುವ ಪೇಟಿಎಂ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪುನಃ ಬಳಕೆದಾರರಿಗೆ ಲಭ್ಯವಾಗಿರುವುದು, ಗ್ರಾಹಕರಲ್ಲಿ ತುಸು ಸಂತಸ ತರಿಸಿದೆ.
ಗೂಗಲ್ ನಿಯಮಗಳನ್ನು ಪಾಲಿಸಿರುವ ಕುರಿತು ಹಾಗೂ ಗ್ರಾಹಕರ ಸೇವೆಗೆ ಲಭ್ಯವಾಗಿರುವ ಬಗ್ಗೆ ಕಂಪನಿ ಟ್ವೀಟ್ ಮಾಡಿ ತಿಳಿಸಿದೆ.