ನವದೆಹಲಿ : ಇಂದು ಜಗತ್ತು ಕಂಡ ಮಹಾನ್ ಸ್ವಾತಂತ್ರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಅಂಗವಾಗಿ ಪರಾಕ್ರಮ್ ದಿವಸ್ ಆಚರಣೆ ಮಾಡಲಾಗುತ್ತಿದೆ.
ಸ್ವಾತಂತ್ರ್ಯ ಸೇನಾನಿ, ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ರವರು ದೇಶ ಕಂಡ ಅತ್ಯುತ್ತಮ ಹೋರಾಟಗಾರರಲ್ಲಿ ಒಬ್ಬರು. ದೇಶಕ್ಕೆ ಸ್ವತಂತ್ರ ಸಿಗುವುದು ಕೇವಲ ಹೋರಾಟದಿಂದ ಮಾತ್ರ ಎಂದು ನಂಬಿದ್ದ ನೇತಾಜಿ ಅವರು ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದರು.
ಸ್ವಂತ ಸೇನೆಯನ್ನು ಸಹ ಹೊಂದಿದ್ದ ಸುಭಾಷ್ ಚಂದ್ರ ಬೋಸ್ ಅವರು ಆ ಸಂದರ್ಭದಲ್ಲಿ ವಿದೇಶ ಪರ್ಯಟನೆ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಗಂಡೆದೆಯ ಹೋರಾಟಗಾರ ಎನಿಸಿಕೊಂಡರು.
ಕೇಂದ್ರ ಸರ್ಕಾರವು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನದಂದು ಪ್ರತಿವರ್ಷ ಪರಾಕ್ರಮ ದಿನವಾಗಿ ಆಚರಿಸಲು ನಿರ್ಧರಿಸಿದೆ. ನೇತಾಜಿ ಅವರು ದೇಶಕ್ಕಾಗಿ ಮಾಡಿದ ತ್ಯಾಗ ಸೇವೆಯನ್ನು ಗುರುತಿಸಿ ಮೋದಿ ಸರ್ಕಾರ ನೇತಾಜಿ ಅವರ ಜಯಂತಿಯನ್ನು “ಪರಾಕ್ರಮ ದಿವಸ್” ಆಗಿ ಆಚರಿಸಲು ನಿರ್ಧರಿಸಿದ್ದು, ಇದು ನೇತಾಜಿ ಅವರಿಗೆ ಸಲ್ಲಿಸುತ್ತಿರುವ ಅತ್ಯುನ್ನತ ಗೌರವವಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ ಹಾಗು ಪರಾಕ್ರಮ ದಿವಸ್ ಆದ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿ, ಸಿಟಿ ರವಿ, ಶ್ರೀರಾಮುಲು, ಆನಂದ್ ಸಿಂಗ್ ಸೇರಿದಂತೆ ಗಣ್ಯರು ಪರಾಕ್ರಮ ದಿವಸ್ ಆಚರಣೆಯ ಅಂಗವಾಗಿ ಶುಭ ನಮನಗಳನ್ನು ಸಲ್ಲಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನೇತಾರ, ಧೈರ್ಯದಿಂದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಹೋರಾಟದ ಕಹಳೆಯನ್ನೂದಿದ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳು. ಅವರ ದೇಶಪ್ರೇಮ, ಧೈರ್ಯ ಮತ್ತು ಹೋರಾಟಗಳು ಭಾರತೀಯರ ಪಾಲಿಗೆ ಸದಾ ಸ್ಫೂರ್ತಿಯ ಸೆಲೆಗಳಾಗಿವೆ. #ParakramDiwas pic.twitter.com/5WLDbB8wOk
— B.S. Yediyurappa (@BSYBJP) January 23, 2021