ಏಕಾಂಗಿಯಾಗಿ ಜೀವಜಲವನ್ನೇ ತರಿಸಿ ಗುಡ್ಡೆಯನ್ನು ನಂದನವನ ಮಾಡಿದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಕೇಂದ್ರ ಸರ್ಕಾರವೂ 73ನೇ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಹೌದು, ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರಿಗೆ 76 ವರ್ಷವಾಗಿದ್ದು, ಜಮೀನಿನಲ್ಲಿ ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇರಲಿಲ್ಲ. ಆಗ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನೊಂದಿಗೆ ತುಂತುರು ನೀರಾವರಿ, ಸ್ಟ್ರಿಂಕ್ಲರ್ ನೀರಾವರಿ ವ್ಯವಸ್ಥೆಗಾಗಿ ಏಕಾಂಗಿಯಾಗಿ ಬರೋಬ್ಬರಿ ಯಶಸ್ವಿಯಾಗಿ ಏಳು ಸುರಂಗಗಳನ್ನು ಕೊರೆರೆಯುವ ಮೂಲಕ ಯಶಸ್ವಿ ರೈತರಾದರು.
ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ, ಆದರೂ ಕೂಡ ಭಾರೀ ಉದ್ಧದ ಸುರಂಗ ಕೊರೆದು ಕೃಷಿ ಮಾಡಿದರು. ಹಗಲು ರಾತ್ರಿಯೆನ್ನದೇ ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕಿದ ಮಹಾಲಿಂಗ ನಾಯ್ಕ ಮಹಾನ್ ಸಾಧಕರು.
ಇವರ ಈ ಮಹಾನ್ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.