ನವದೆಹಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ದೇಶೀಯ ವ್ಯಾಪಾರಿಗಳಿಗೆ ಉತ್ತೇಜನ ನೀಡಿರುವುದರಿಂದ ಸ್ಥಳೀಯ ಆರ್ಥಿಕತೆಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವೋಕಲ್ ಫ಼ಾರ್ ಲೋಕಲ್ (ಸ್ಥಳೀಯರಿಗೆ ಬೆಂಬಲವಾಗಿ ಸಜ್ಜುಗೊಳಿಸಬೇಕು) ಹಂತ ಹಂತವಾಗಿ ಹರಡಬೇಕು ಎಂದು ಹೇಳಿದ್ದಾರೆ.
ಖ್ಯಾತ ಜೈನ ಬೋಧಕ ವಿಜಯ್ ವಲ್ಲಭಭಾಯ್ ಸುರೇಶ್ವರ ಅವರ 151 ನೇ ಜನ್ಮ ದಿನಾಚರಣೆಯಂದು ರಾಜಸ್ಥಾನದ ಪಾಲಿಯಲ್ಲಿ ನಡೆದ ವಿಡಿಯೋ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖ್ಯಾತ ಜೈನ ಬೋಧಕ ವಿಜಯ್ ವಲ್ಲಭಭಾಯ್ ಸುರೇಶ್ವರ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಜೈನ ಪ್ರಾಧ್ಯಾಪಕ ವಿಜಯ್ ವಲ್ಲಭ್ ಅವರ ಸಾಧನೆಯನ್ನು ಶ್ಲಾಘಿಸಿದರು.
ಇದೆ ಸಂದರ್ಭದಲ್ಲಿ ಕರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಶ್ಲಾಘನೀಯ ಪಾತ್ರ ವಹಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಕೈಗೊಂಡ ಕ್ರಮದಲ್ಲಿ ಮಾಧ್ಯಮಗಳು ಅಮೂಲ್ಯವಾದ ಪಾಲುದಾರರು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಲಿಖಿತ ಸಂದೇಶ ನೀಡಿದರು. ಸಕಾರಾತ್ಮಕ ಟೀಕೆ ಅಥವಾ ಯಶಸ್ಸಿನ ಕಥೆಗಳನ್ನು ಪ್ರಚಾರ ಮಾಡುವ ಮೂಲಕ ಮಾಧ್ಯಮಗಳು ಜನರಿಗೆ ಒಳ್ಳೆಯದನ್ನು ಮಾಡುತ್ತಿವೆ ಎಂದು ಹೇಳಿದ್ದಾರೆ.