ಕೇಂದ್ರ ಸರ್ಕಾರ ಗೃಹ ಬಳಕೆಯ LPG ಸಿಲಿಂಡರ್‌ಗಳಿಗೆ ಕೋಟಾ ನಿಗದಿಪಡಿಸಿದ್ದು, ಹೊಸ ಆದೇಶದ ಪ್ರಕಾರ, ಇನ್ಮುಂದೆ ಗ್ರಾಹಕರು ವರ್ಷಕ್ಕೆ 15 ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ. ತಿಂಗಳಲ್ಲಿ 2ಕ್ಕಿಂತ ಹೆಚ್ಚು ಸಿಲಿಂಡರ್ ಕೊಳ್ಳಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟು ಆದೇಶ ಮಾಡಿದೆ.
ಹೌದು, ಹೆಚ್ಚು ಸಿಲಿಂಡರ್‌ಗಳು ಬೇಕಾದರೆ ತೈಲ ಕಂಪನಿಯ ಅಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಅಖಿಲ ಭಾರತ ವಿತರಕರ ಸಂಘದ ಅಧ್ಯಕ್ಷ ವಿಪುಲ್ ಪುರೋಹಿತ್ ಮಾಹಿತಿ ನೀಡಿದ್ದಾರೆ.
ಇನ್ನು, ಕೇಂದ್ರ ಸರ್ಕಾರ ಮಿತಿ ಕೋಟಾ ನಿಗದಿಪಡಿಸಿದ್ದರಿಂದ, ಗೃಹಬಳಕೆಯ ಅನಿಲ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುವುದು ತಪ್ಪಲಿದೆ. ಸಬ್ಸಿಡಿಯುಕ್ತ ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್‌ಗಳು ವರ್ಷಕ್ಕೆ 12 ಮಾತ್ರ ಲಭ್ಯವಾಗಲಿದೆ.




