ದಾವಣಗೆರೆ ಫೆ.05 : ದಾವಣಗೆರೆ ಜಿಲ್ಲೆಯಾದ್ಯಂತ ಬೇಸಿಗೆ ಬೆಳೆಗಳು ಬಿತ್ತನೆ/ನಾಟಿ ಹಂತದಿಂದ ಬೆಳವಣಿಗೆ ಹಂತದಲ್ಲಿವೆ. ಬೇಸಿಗೆ ಬೆಳೆಗಳಿಗೆ ಈ ಹಂತದಲ್ಲಿ ಕೈಗೊಳ್ಳಬಹುದಾದ ಬೇಸಾಯ ಕ್ರಮಗಳು, ಕಳೆ ನಿರ್ವಹಣೆ, ಸಸ್ಯ ಸಂರಕ್ಷಣೆ ಹಾಗೂ ಯಾಂತ್ರೀಕೃತ ನಾಟಿ ಕುರಿತಾದ ಮಾಹಿತಿ ನೀಡಲು ಕೃಷಿ ಇಲಾಖೆ ವತಿಯಿಂದ ಫೆ.08 ರಂದು ಸಂಜೆ 7 ಗಂಟೆಗೆ ಆನ್‍ಲೈನ್‍ನಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಜಂಟಿ ಕೃಷಿ ನಿರ್ದೇಶಕರಾದ ಡಾ. ಆರ್.ಜಿ.ಗೊಲ್ಲರ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯತಜ್ಞರಾದ ಬಿ.ಕೆ.ಮಲ್ಲಿಕಾರ್ಜುನ್ (ಬೇಸಾಯ ಶಾಸ್ತ್ರ), ಹನುಮಂತಗೌಡ ಸಣ್ಣಗೌಡರ್ (ಮಣ್ಣು ವಿಜ್ಞಾನಿ), ಹನುಮನಹಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಷಯತಜ್ಞರಾದ ಡಾ .ರಾಜಕುಮಾರ್ (ಮಣ್ಣು ವಿಜ್ಞಾನಿ) ಹಾಗೂ ಇಕೋ ಅಗ್ರಿ ಪ್ರೂನರ್ ನಾಗನಗೌಡ ಇವರು ಪಾಲ್ಗೊಳ್ಳಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳು ರೈತ ಬಾಂಧವರಿಗೆ ಬೇಸಿಗೆ ಭತ್ತದಲ್ಲಿ ಯಾಂತ್ರೀಕೃತ ನಾಟಿ ಹಾಗೂ ಬೇಸಿಗೆ ಬೆಳೆಗಳಿಗೆ ಸಮಯೋಚಿತ ಸಲಹೆಗಳನ್ನು ನೀಡಲಿದ್ದಾರೆ.
ತರಬೇತಿಯಲ್ಲಿ ಪಾಲ್ಗೊಳ್ಳಲಿಚ್ಚಿಸುವ ರೈತ ಬಾಂಧವರು ಮುಂಚಿತವಾಗಿ ದೂರವಾಣಿ ಸಂಖ್ಯೆ: 9449082829ಗೆ ಸಂದೇಶ ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ವಿಚಾರಗೋಷ್ಠಿಯ ಆರಂಭದಲ್ಲಿಯೇ ಉತ್ತರ ಪಡೆಯಬಯಸುವವರು ತಮ್ಮ ಪ್ರಶ್ನೆಯನ್ನು ಫೆ.08 ರಂದು ಮಧ್ಯಾಹ್ನ 3 ಗಂಟೆಯೊಳಗೆ ಸಂದೇಶ ಮುಖೇನ ಕಳುಹಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.