One Nation One Card : ಸೆಪ್ಟೆಂಬರ್ ತಿಂಗಳೊಳಗೆ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ವಾಹನ ನೋಂದಣಿಗೆ ಹೊಸ ಹೈಟೆಕ್ ಸ್ಮಾರ್ಟ್ ಕಾರ್ಡ್ ಗಳ ವಿತರಣೆ ವ್ಯವಸ್ಥೆ ಜಾರಿಗೆ ಬರಲಿದ್ದು, ರಾಜ್ಯದಲ್ಲೂ ಒನ್ ನೇಷನ್ ಒನ್ ಕಾರ್ಡ್ ಜಾರಿಗೆ ಬರಲಿದ್ದು ಡಿಎಲ್, ಆರ್ ಸಿ ಕಾರ್ಡ್ ನಲ್ಲಿ ವಿಧಾನಸೌಧ ಮರೆಯಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಧಾನಸೌದ ಇಲ್ಲ
ಈಗ ವಿತರಿಸುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಇರುವಂತೆ ವಿಧಾನಸೌಧ, ಕರ್ನಾಟಕದ ಚಿಹ್ನೆ, ತ್ರಿವರ್ಣ ಧ್ವಜ ಯಾವುದು ಹೊಸದಾಗಿ ವಿತರಿಸುವ ಕಾರ್ಡ್ ನಲ್ಲಿ ಇರುವುದಿಲ್ಲ. ಒನ್ ನೇಷನ್ ಒನ್ ಕಾರ್ಡ್ ಜಾರಿಯಾದ ನಂತ್ರ ಕಾರ್ಡ್ ಮೇಲ್ಬಾಗದಲ್ಲಿ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭ ಮಾತ್ರವೇ ಇರಲಿದೆ.
ಸ್ಮಾರ್ಟ್ ಕಾರ್ಡ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಡಿ ಸ್ಕಾರ್ಟ್ ಕಾರ್ಡ್ ಪೂರೈಕೆಯಾಗಲಿದ್ದು, ರಾಷ್ಟ್ರೀಯ ಚಿಹ್ನೆಯ ಜೊತೆಗೆ ಇಂಡಿಯನ್ ಯೂನಿಯನ್ ಡ್ರೈವಿಂಗ್ ಲೈಸೆನ್ಸ್ ಇಂಡಿಯನ್ ಯೂನಿಯನ್ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಎಂದಷ್ಟೇ ಇರಲಿದೆ. ಪ್ರಸ್ತುತ ನೀಡುತ್ತಿರೋ ಡ್ರೈವಿಂಗ್ ಲೈಸೆನ್ಸ್ ವಾಹನ ನೋಂದಣಿ ಕಾರ್ಡ್ ಗಳು ಪಾಲಿ ವಿನೈಲ್ ಕ್ಲೋರೈಡ್ ಅಂದರೆ ಪಿವಿಸಿ ಕಾರ್ಡ್ ಆಗಿದ್ದವು. ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ ಅಂದರೆ ಪಿಸಿಸಿ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ.
ಕಾರ್ಡ್ನಲ್ಲಿ ಏನಿರಲಿದೆ
- ವಾಹನದ ನೋಂದಣಿ ಸಂಖ್ಯೆ, ದಿನಾಂಕ, ಮುಕ್ತಾಯದ ಅವಧಿ
- ಚಾಸ್ಸಿ ನಂಬರ್, ಇಂಜಿನ್ ನಂಬರ್ ಇರಲಿದೆ
- ಮಾಲೀಕರ ಹೆಸರು, ವಿಳಾಸ, ಎಮಿಷನ್ ವಿವರ
- ಯಾವ ವಾಹನ, ತಯಾರಿಕಾ ಸಂಸ್ಥೆಯ ಮಾಹಿತಿ
- ಮಾಡೆಲ್ ಯಾವುದು, ಬಣ್ಣ, ವಾಹನದ ವಿನ್ಯಾಸ
- ಸೀಟಿಂಗ್ ಸಾಮರ್ಥ್ಯ, ವಾಹನ ಸಾಮರ್ಥ್ಯ, ಸಾಲ ಕೊಟ್ಟಿರುವ ಸಂಸ್ಥೆಯ ಹೆಸರು
ಕಾರ್ಡ್ನ ವಿಶೇಷತೆ
- ಅಕ್ಷರಗಳು ಅಳಿಸಿ ಹೋಗುವುದಿಲ್ಲ.
- ಕಾರ್ಡ್ ಮುರಿದು ಹೋಗುವ ಸಾಧ್ಯತೆ ಇಲ್ಲ.
- ನಕಲಿ ಕಾರ್ಡ್ಗಳ ತಯಾರಿಕೆಗೆ ಬ್ರೇಕ್ ಬೀಳಲಿದೆ.
- ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯೋಗವಾಗಲಿದೆ.
- ವಾಹನ ಹಾಗೂ ವಾಹನ ಮಾಲೀಕರ ಮಾಹಿತಿ ದೃಢೀಕರಣ ಸುಲಭವಾಗಲಿದೆ.



